ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪಿ.ಎನ್.ಆಚಾರ್ಯರ ಚಿತ್ರಗಳಲ್ಲಿ ಸೌಂದರ್ಯಪ್ರಜ್ಞೆ ಯ ಜೀವಂತಿಗೆ ಮತ್ತು ಸೃಜನ ಶೀಲತೆಯಿಂದ ಅವರು ರಚಿಸಿದ ಚಿತ್ರಗಳಿಂದ ಕಲಾ ಮನಸ್ಸುಗಳನ್ನು ಸೆಳೆಯಬಲ್ಲ ಶಕ್ತಿ ಇದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಭಾನುವಾರ ಉಡುಪಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರುಗಿದ ಉಡುಪಿಯ ಖ್ಯಾತ ಚಿತ್ರ ಕಲಾವಿದ ಪಿ ಎನ್ ಆಚಾರ್ಯ ಇವರಿಗೆ ಅವರ ಅಭಿಮಾನಿ ಬಳಗದವರಿಂದ ಕಲಾಸಿರಿ ಗ್ರಂಥದ ಲೋಕಾರ್ಪಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಕಲಾಸಿರಿ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತದಲ್ಲಿ ವಿಶ್ವಕರ್ಮರಿಂದಲೇ ಸನಾತನ ಸಂಸ್ಕೃತಿ ಉಳಿದಿದೆ ಮತ್ತು ಬೆಳೆದಿದೆ ಎನ್ನುವುದಕ್ಕೆ ಪಿ.ಎನ್.ಆಚಾರ್ಯರು ಸಾಕ್ಷಿಯಾಗಿದ್ದಾರೆ. ಯಾವೂದೇ ಒಂದು ಕಲೆಯ ಕಲಾವಿದರು ಋಷಿ ಸದೃಶರು ಅವರ ತ್ಯಾಗ ಮತ್ತು ಪರಿಶ್ರಮದಿಂದಲೇ ಇಂದು ನಾಡಿನಾದ್ಯಂತ ಇರುವ ಕಲಾ ದೇಗುಲಗಳು ಮೂರ್ತಿ ಶಿಲ್ಪಗಳು ಆಸ್ತಿಕರನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಇದೆ ಎಂದರು.
ಅಭಿಮಾನಿ ಬಳಗದ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಿಟ್ಟೆ ಯೂನಿವರ್ಸಿಟಿಯ ಇನ್ಕು÷್ಯಬೇಶನ್ ಕೇಂದ್ರದ ಸಿ .ಇ.ಒ. ಡಾ. ಎ.ಪಿ. ಆಚಾರ್ , ಚಿತ್ರ ಕಲಾವಿದ ಗಣೇಶ ಸೋಮಯಾಜಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಿ. ಎನ್. ಆಚಾರ್ಯ ದಂಪತಿಗಳನ್ನು ಅಭಿಮಾನಿ ಬಳಗದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವಿತರಿಸಲಾಯಿತು.
ಕೃತಿ ಪ್ರಕಟಣೆಗೆ ಸಹಯೋಗ ನೀಡಿದ ಕೆ. ಮಹಾಬಲೇಶ್ವರ ಆಚಾರ್, ರತ್ನಾವತಿ ಜೆ. ಬೈಕಾಡಿ ಹಾಗೂ ಗ್ರಂಥದ ಪ್ರಾಯೋಜಕರನ್ನು ಅಭಿನಂದಿಸಲಾಯಿತು.
ರೂಪಾ ವಸುಂಧರ್ ಅವರಿಂದ ಕಲಾಕೃತಿಗಳ ಪ್ರದರ್ಶನ ನಡೆಯಿತು.
ರತ್ನಾವತಿ ಜೆ ಬೈಕಾಡಿ ,ಅಕ್ಷತಾ ಬೈಕಾಡಿ ಮೈಥಿಲಿ ಪಡುಬಿದ್ರಿ ಮತ್ತು ಭಳಗದವರಿಂದ ಗೀತ ಗಾಯನ ಜರುಗಿತು.
ಗ್ರಂಥದ ಸಂಪಾದಕ ಡಾ. ಗುರುದಾಸ್ ಎಸ್. ಪಿ. ಪ್ರಸ್ತಾವನೆ ಗೈದರು. ಡಾ. ಉಪಾಧ್ಯಾಯ ಮೂಡುಬೆಳ್ಳೆ ಕೃತಿ ಪರಿಚಯ ಮಾಡಿದರು, ಉಪ ಸಂಪಾದಕ ಪ್ರೊ. ಜಿ. ಯಶವಂತ ಆಚಾರ್ಯ ಅಭಿನಂದನಾ ಭಾಷಣ ಮಾಡಿ, ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಕೆ.ಮುರಳೀಧರ್ ವಂದಿಸಿದರು.