ಸಾಲಿಗ್ರಾಮ : ಗಜೇಂದ್ರ (ಆನೆ) ಮತ್ತು ಮೃಗೇಂದ್ರ (ಸಿಂಹ)ರ ಅನ್ಯೋನ್ಯತೆಯ ಕಾರಣಕ್ಕಾಗಿ “ನಿರ್ವೈರ್ಯ ಸ್ಥಲ”ವೆಂದೇ ಪ್ರಸಿದ್ಧವಾಗಿರುವ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಳದಲ್ಲಿ ಆಗಸ್ಟ್ ೩೦ ರ ಮಂಗಳವಾರ ಮತ್ತು ೩೧ ರ ಬುಧವಾರದಂದು ಅನುಕ್ರಮವಾಗಿ ಗೌರಿ ಹಬ್ಬ ಮತ್ತು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು.
ಗೌರೀ ತೃತೀಯಾ ಪ್ರಯುಕ್ತ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ಮಂಗಳವಾರ ಸಂಜೆ ೬ ಗಂಟೆಗೆ ವಿಶೇಷ ರಂಗಪೂಜೆಯನ್ನು ಸಲ್ಲಿಸಲಾಗುವುದು.ಮರುದಿನ ಗಣೇಶ ಚತುರ್ಥಿ ಯಂದು ಅಷ್ಟೋತ್ತರ ವಿಂಶತಿ ನಾರಿಕೇಳ ಗಣ ಯಾಗ, ನರಸಿಂಹ ಹೋಮ ಮತ್ತು ಗಣಪತಿ ಯಂತ್ರದ ಮೇಲೆ ಪ್ರತಿಷ್ಠಾಪಿತ ಶ್ರೀ ನರಸಿಂಹ ದೇವರಿಗೆ ಮೂಡುಗಣಪತಿ ಸೇವೆಯನ್ನು ನಡೆಸಲಾಗುವುದು.
ಅದೇ ದಿನ ಸಂಜೆ ಸಂಜೆ ಆರು ಗಂಟೆಗೆ ಶ್ರೀ ಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆಯ ನಂತರ ಶ್ರೀ ನರಸಿಂಹ ದೇವರಿಗೆ ಕಿರಿ ರಂಗಪೂಜೆ ಮತ್ತು ವಿಶೇಷ ಉತ್ಸವ ಬಲಿ ಯನ್ನು ನೆರವೇರಿಸಲಾಗುವುದೆಂದು ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.