ಜಮ್ಶೆಡ್‌ಪುರ : ಎಲ್ಲೆಡೆ ಗಣೇಶ ಹಬ್ಬ ಸಂಭ್ರಮ ಮನೆ ಮಾಡಿದೆ. ಜಾರ್ಖಂಡ್‌ನಲ್ಲಿ ವಿಶೇಷ ರೀತಿಯಲ್ಲಿ ಗಣೇಶ ಹಬ್ಬ ಆಚರಣೆ ಗಮನ ಸೆಳೆದಿದೆ. ಹೌದು, ಜಮ್‌ಶೆಡ್‌ಪುರದಲ್ಲಿ ಆಧಾರ್ ಕಾರ್ಡ್ ರೀತಿಯ ಪೆಂಡಾಲ್ ನಿರ್ಮಿಸಿ, ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.
ವಿಶೇಷತೆ ಅಂದ್ರೆ, ಕೈಲಾಸದಲ್ಲಿರುವ ಗಣೇಶನ ವಿಳಾಸ ಮತ್ತು ಅವನ ದಿನಾಂಕವನ್ನು ಗುರುತಿಸಲಾಗಿದೆ.
ಆಧಾರ್ ಕಾರ್ಡ್ ರೀತಿಯ ಪೆಂಡಾಲ್ ನಿರ್ಮಿಸಿ ಗಮನ ಸೆಳೆಯಲಾಗಿದೆ. ಪೆಂಡಾಲ್ ಒಳಗೆ ಗಣೇಶನ ವಿಗ್ರಹವನ್ನು ಇರಿಸಲಾಗಿದೆ. ಅದರ ಬದಿಯಲ್ಲಿರುವ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಗಣೇಶನ ಚಿತ್ರಗಳ ಗೂಗಲ್ ಲಿಂಕ್ ಪರದೆಯ ಮೇಲೆ ತೆರೆಯುತ್ತದೆ.
Advertisement. Scroll to continue reading.
ಅದರ ಮೇಲೆ ನಮೂದಿಸಲಾದ ವಿಳಾಸವು ಶ್ರೀ ಗಣೇಶ್ S/o ಮಹದೇವ್, ಕೈಲಾಶ್ ಪರ್ವತ, ಮೇಲಿನ ಮಹಡಿ, ಹತ್ತಿರ, ಮಾನಸರೋವರ, ಕೈಲಾಸ. ಇದರ ಜೊತೆಗೆ ಪಿನ್‌ಕೋಡ್- 000001 ಮತ್ತು ಹುಟ್ಟಿದ ವರ್ಷ 01/01/600CE(6ನೇ ಶತಮಾನ) ವನ್ನು ನಮೂದಿಸಲಾಗಿದೆ.
ಸರವ್ ಕುಮಾರ್ ಗಣೇಶ ಪೆಂಡಾಲ್ ನಿರ್ಮಿಸಲಾಗಿದೆ.
In this article:Adhar card, Diksoochi news, diksoochi Tv, diksoochi udupi, Ganesha, jharkhand
Click to comment