ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಯುವ ಜನತೆ ಜೀವ ಮತ್ತು ಜೀವನ ಎರಡನ್ನೂ ಅರ್ಥಪೂರ್ಣವಾಗಿ ನಿಭಾಯಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಬುಧವಾರ ಬಿ.ಎಂ.ಎಂ ಪ್ರೌಢ ಶಾಲಾ ರಂಗ ಮಂಟಪದಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕೂರಾಡಿ ಮತ್ತು ಸ್ಫೂರ್ತಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇವರ ನೇತೃತ್ವದಲ್ಲಿ ೧೦ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿ, ಯವಜನತೆಯನ್ನು ಒಂದು ಗೂಡಿಸಲು ಶ್ರೀ ಗಣೇಶೋತ್ಸವದಂತ ಕಾರ್ಯಕ್ರಮದಿಂದ ದೇವರ ಅನುಗ್ರಹ ಸಿಗುತ್ತದೆ. ಆದರೆ ಅತೀ ಹೆಚ್ಚು ಯುವ ಸಂಪತ್ತು ಇರುವ ಭಾರತದಲ್ಲಿ ಮುಖ್ಯವಾಗಿ ಯುವಕರು ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವಾಗ ಹೆಲ್ಮೆಟ್ ಖಡ್ಡಾಯವಾಗಿ ಧರಿಸಿ ವಾಹನದಂತೆ ಮತ್ತು ಜೀವಕ್ಕೆ ಕೂಡಾ ಪ್ರಾಮುಖ್ಯತೆ ನೀಡಿ ಎಂದರು.
ಇದೇ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಪೃಥ್ವೀರಾಜ್ ಶೆಟ್ಟಿ ಸೇರಿದಂತೆ ನಿಕಟಪೂರ್ವ ಸಮಿತಿಯ ಅಧ್ಯಕ್ಷರುಗಗಳನ್ನು ಸನ್ಮಾನಿಸಲಾಯಿತು. ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು.
ಶೇಖರ ಹೆಗ್ಡೆ, ಹರೀಶ್ ಶ್ಯಾನುಭಾಗ್, ದೇವದಾಸ ಶೆಟ್ಟಿ, ರಾಘವೇಂದ್ರ ಶೆಟ್ಟಿ ಕೂರಾಡಿ, ಗಣೇಶ್ ಭಟ್ಟ್, ನಿತ್ಯಾನಂದ ಶೆಟ್ಟಿ ನಡೂರು, ಚಂದ್ರ ಶೇಖರ ಶೆಟ್ಟಿ, ಚಂದ್ರ ಮರಕಾಲ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಬಳಿಕ ಮನರಂಜನಾ ಕಾರ್ಯಕ್ರಮ ಜರುಗಿತು.