ಲಂಡನ್ : ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್ʼನಲ್ಲಿ ಭಾರತ ಮೂಲದ ರಿಷಿ ಸುನಕ್ ಹಿಂದಿಕ್ಕೆ ಲಿಜ್ ಟ್ರಸ್ ಗೆಲುವು ಸಾಧಿಸಿದ್ದಾರೆ. ಬ್ರಿಟನ್ ದೇಶದ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಸದಸ್ಯರುಲಿಜ್ ಟ್ರಸ್ ಅವರನ್ನು ತಮ್ಮ ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಯುನೈಟೆಡ್ ಕಿಂಗ್ ಡಮ್ ನ ಮುಂದಿನ ಪ್ರಧಾನ ಮಂತ್ರಿಯನ್ನಾಗಿ ಟ್ರಸ್ ಆಯ್ಕೆ ನಡೆದಿದೆ. ಮಂಗಳವಾರ ಬೋರಿಸ್ ಜಾನ್ಸನ್ ಅವರಿಂದ ಟ್ರಸ್ ಅಧಿಕಾರ ಸ್ವೀಕರಿಸಲಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಟ್ರಸ್, ರಿಷಿ ಸುನಕ್ ಅವರನ್ನು ಸೋಲಿಸಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಪ್ರಧಾನ ಮಂತ್ರಿ ಸ್ಥಾನವನ್ನು ಪಡೆದಿದ್ದಾರೆ.
Advertisement. Scroll to continue reading.