Connect with us

Hi, what are you looking for?

Diksoochi News

ರಾಷ್ಟ್ರೀಯ

2000 ರೂ. ನೋಟುಗಳ ವಿನಿಮಯ ಅವಧಿ ಅಕ್ಟೋಬರ್ 7 ರ ವರೆಗೆ ವಿಸ್ತರಣೆ

1

ನವದೆಹಲಿ : 2000 ರೂ. ನೋಟುಗಳನ್ನು ಸಾರ್ವಜನಿಕರಿಗೆ ವಿನಿಮಯ ಮಾಡಿಕೊಳ್ಳಲು, ಸಲ್ಲಿಸಲು ಅಕ್ಟೋಬರ್ 7 ರವರೆಗೆ ಗಡುವನ್ನು ವಿಸ್ತರಿಸಲು ಆರ್‌ಬಿ‌ಐ ನಿರ್ಧರಿಸಿದೆ ಎಂದು ಹೇಳಿದೆ.

2000 ರೂಪಾಯಿ ನೋಟುಗಳನ್ನು ಹಿಂದಿರುಗಿಸುವ ಮೂಲ ಗಡುವು ಸೆಪ್ಟೆಂಬರ್ 30 ರಂದು ಮುಕ್ತಾಯಗೊಳ್ಳಲಿದೆ.

ಮೇ 19 ರಿಂದ ಸಾರ್ವಜನಿಕರು 3.42 ಲಕ್ಷ ಕೋಟಿ ರೂ. 2,000 ನೋಟುಗಳನ್ನು ಹಿಂದಿರುಗಿಸಿದ್ದಾರೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

Advertisement. Scroll to continue reading.

ಈ ನೋಟುಗಳನ್ನು ಸೆಪ್ಟೆಂಬರ್ 29 ರ ವರೆಗೆ ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಮತ್ತು ಈ ವರ್ಷದ ಮೇ 19 ರ ವರೆಗೆ ಚಲಾವಣೆಯಲ್ಲಿರುವ ಬಾಕಿ ಉಳಿದಿರುವ ಕರೆನ್ಸಿಯ ಶೇ. 96 ರಷ್ಟು ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೇಳಿದೆ.

2,000 ರೂ. ನೋಟುಗಳು ಅಕ್ಟೋಬರ್ 7 ರ ನಂತರವೂ ಕಾನೂನುಬದ್ಧವಾಗಿ ಮುಂದುವರಿಯುತ್ತವೆ. ಆದರೆ, ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ಅದನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!