ಹೆಬ್ರಿ : ಎದೆನೋವಿನಿಂದ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲು ಎಂಬಲ್ಲಿ ನಡೆದಿದೆ.
ರವಿ (58) ಮೃತ ವ್ಯಕ್ತಿ. ಇವರು ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಶನಿವಾ್ ಅಸೌಖ್ಯ ಉಂಟಾದ ಕಾರಣ ಡಾಕ್ಟರ್ ಕ್ಲೀನಿಕ್ಗೆ ಹೋಗಿದ್ದಾರೆ. ಅಲ್ಲಿ ಎದೆನೋವಿನಿಂದ ಕುಸಿದು ಬಿದ್ದಿದ್ದು ಅವರನ್ನು ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.