ಶಿರ್ವ : ರಸ್ತೆ ಬದಿಯಲ್ಲಿ ಅಳವಡಿಸಿದ ಸೋಲಾರ್ ದಾರಿ ದೀಪ ಬ್ಯಾಟರಿಗಳ ಕಳವುಗೈದಿರುವ ಘಟನೆ ಶಿರ್ವದಲ್ಲಿ ನಡೆದಿದೆ.
2021 ನೇ ಸಾಲಿನಲ್ಲಿ ಮಜೂರು ಗ್ರಾಮ ಪಂಚಾಯತ್ ನಿಂದ 92 ಹೇರೂರು ಗ್ರಾಮದ ಹಾಲಿನ ಡೈರಿ ಬಳಿ, ಭವಾನಿ ಪೌಲ್ಟ್ರಿ ಫಾರ್ಮ್ ಬಳಿ, ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಬಳಿ, ಕಲ್ಲುಗುಡ್ಡೆ ಗರಡಿ ಬಳಿ ಮತ್ತು ಪಾದೂರು ಗ್ರಾಮದ ವಳದೂರು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಬಳಿ ಸಾರ್ವಜನಿಕರ ಉಪಯೋಗಕ್ಕಾಗಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಅಳವಡಿಸಿದ ಒಟ್ಟು 15 ಸೊಲಾರ್ ದಾರಿ ದೀಪದ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳವಾದ ಬ್ಯಾಟರಿಯ ಅಂದಾಜು ಮೌಲ್ಯ ಸುಮಾರು 1,42,500/- ಆಗಬಹುದು ಎಂದು ಅಂದಾಜಿಸಲಾಗಿದೆ.
Advertisement. Scroll to continue reading.
ಉಡುಪಿ ಜಿಲ್ಲೆಯ ಕಾಫು ತಾಲೂಕು ಮಜೂರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲಾಸಿನಿ ನೀಡಿದ ದೂರಿನ ಅನ್ವಯ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.