Asian Games : ಭಾರತದ ಪುರುಷರ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿದೆ. ಈ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.
ಶುಕ್ರವಾರ ನಡೆದ ಫೈನಲ್‌ನಲ್ಲಿ ಭಾರತವು ಜಪಾನ್ ತಂಡವನ್ನು ಸೋಲಿಸಿತು. ಇದರೊಂದಿಗೆ ಭಾರತ ತಂಡವೂ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ.
ಪುರುಷರ ಹಾಕಿಯಲ್ಲಿ ಭಾರತ ದಾಖಲೆಯ 16ನೇ ಬಾರಿ ಪದಕ ಗೆದ್ದಿದೆ. ಈ 16 ಪದಕಗಳಲ್ಲಿ 4 ಚಿನ್ನದ ಪದಕಗಳಾಗಿವೆ. ದಕ್ಷಿಣ ಕೊರಿಯಾ ಆತಿಥೇಯ ಚೀನಾವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. ಒಂದು ಕಾಲದಲ್ಲಿ ಶ್ರೇಷ್ಠ ಹಾಕಿ ತಂಡವಾಗಿದ್ದ ಪಾಕಿಸ್ತಾನಕ್ಕೆ ಯಾವುದೇ ಪದಕ ಸಿಗಲಿಲ್ಲ.
ಭಾರತ ತಂಡವು ಗ್ರೂಪ್ ಸುತ್ತಿನಲ್ಲಿಯೇ ಜಪಾನ್ ವಿರುದ್ಧ 4-2 ಮತ್ತು ಪಾಕಿಸ್ತಾನವನ್ನು 10-10-2 ಅಂತರದಿಂದ ಸೋಲಿಸಿತ್ತು. ನಂತರ ಫೈನಲ್‌ನಲ್ಲಿ ಜಪಾನ್ ತಂಡವನ್ನು 5-1 ಅಂತರದಿಂದ ಸೋಲಿಸಿತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡಕ್ಕೆ ಇದು ನಾಲ್ಕನೇ ಚಿನ್ನದ ಪದಕವಾಗಿದೆ. ಈ ಹಿಂದೆ 2014ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆದ್ದಿತ್ತು.
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತೀಯ ಆಟಗಾರರು ಇತಿಹಾಸ ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ 100 ಪದಕ ಗಳಿಸಿದೆ. ಮೊದಲ ಬಾರಿಗೆ ಭಾರತವು 100 ಪದಕಗಳನ್ನು ತಲುಪಿದೆ.