ಬ್ರಹ್ಮಾವರ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಚೇರ್ಕಾಡಿ ಗ್ರಾಮದ, ಪೇತ್ರಿ, ಸಿಂಗನಕೋಡಿ ಎಂಬಲ್ಲಿ ನಡೆದಿದೆ.
ಸದಾಶಿವ ಪೂಜಾರಿ (೬೮) ಆತ್ಮಹತ್ಯೆ ಮಾಡಿಕೊಂಡವರು.
ಸದಾಶಿವ ಅವರಿಗೆ ಬಿ.ಪಿ ಮತ್ತು ಶುಗರ್ ಖಾಯಿಲೆ ಇತ್ತು. ಅಲ್ಲದೇ ಕೆಲವು ವರ್ಷಗಳಿಂದ ಕೆಲಸಕ್ಕೆ ಎಲ್ಲಿಗೂ ಹೋಗಲು ಆಗದೇ ಇದ್ದು, ಇದೇ ಕಾರಣದಿಂದ ಅವರು ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಶನಿವಾರ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.