Connect with us

Hi, what are you looking for?

Diksoochi News

ಕ್ರೀಡೆ

WORLDCUP 2023 : ಆಫ್ಘಾನ್ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಗೆಲುವು

1

ನವದೆಹಲಿ: ನಾಯಕ ರೋಹಿತ್‌ ಶರ್ಮಾ (Rohit Sharma) ಸ್ಫೋಟಕ ಶತಕ, ವಿರಾಟ್‌ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್‌ ನಷ್ಟಕ್ಕೆ 272 ರನ್‌ ಗಳಿಸಿತು. 273 ರನ್‌ಗಳ ಸವಾಲನ್ನು ಪಡೆದ ಭಾರತ 35 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 273 ರನ್‌ ಹೊಡೆಯುವ ಮೂಲಕ ಗುರಿಯನ್ನು ತಲುಪಿತು.

ರನ್ ಚೇಸ್ ವೇಳೆ ಆರಂಭಿಕರಾದ ರೋಹಿತ್ ಹಾಗೂ ಕಿಶನ್ ಶತಕದ ಜತೆಯಾಟವಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 156ರನ್ ಪೇರಿಸಿತು.

Advertisement. Scroll to continue reading.

ಇಶನ್‌ ಕಿಶನ್‌ 47 ರನ್‌ (47 ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರೆ, ರೋಹಿತ್‌ ಶರ್ಮಾ 131 ರನ್‌ (84 ಎಸೆತ, 16 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಬೌಲ್ಡ್‌ ಆದರು.

ಮೂರನೇ ವಿಕೆಟಿಗೆ ಜತೆಯಾದ ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ 56 ಎಸೆತಗಳಲ್ಲಿ 68 ರನ್‌ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿರಾಟ್‌ ಕೊಹ್ಲಿ ಔಟಾಗದೇ 55 ರನ್‌ (56 ಎಸೆತ, 6 ಬೌಂಡರಿ), ಶ್ರೇಯಸ್‌ ಅಯ್ಯರ್‌ ಔಟಾಗದೇ 25 ರನ್‌ (23 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

ರಾಷ್ಟ್ರೀಯ

0 ಲಖನೌ: ಉತ್ತರ ಪ್ರದೇಶದ ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು ಕುರಿತು ಪುತ್ರ ಉಮರ್ ಅನ್ಸಾರಿ ಸ್ಫೋಟಕ ಹೇಳಿಕೆ ನೀಡಿದ್ದು, ತಂದೆಯನ್ನು ವಿಷಪ್ರಾಶನ ಮಾಡಿಸಿ, ಸಾವನ್ನಪ್ಪುವಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ...

ಅರೆ ಹೌದಾ!

0 ಚೆನ್ನೈ: ಸಾಮಾನ್ಯವಾಗಿ ಅಂಗಡಿಗಳಲ್ಲಿ ಹೆಚ್ಚೆಂದರೆ 10ರುಪಾಯಿಗೆ ಒಂದು ನಿಂಬೆ ಹಣ್ಣು ದೊರೆಯುತ್ತದೆ. ಆದರೆ ತಮಿಳುನಾಡಿನ  ವಿಲ್ಲುಪುರಂ ಜಿಲ್ಲೆಯ ಮುರುಗನ್ ದೇವಸ್ಥಾನದ ಉತಿರಂ ಹಬ್ಬದ ಸಂದರ್ಭದಲ್ಲಿ ಒಟ್ಟು ಒಂಬತ್ತು ನಿಂಬೆ ಹಣ್ಣು ಬರೋಬ್ಬರಿ 2.36...

error: Content is protected !!