2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಶುಕ್ರವಾರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅನುಮೋದನೆ ನೀಡಿದೆ.
128 ವರ್ಷಗಳ ನಂತರ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸಲು ಸಂಘಟಕರು ಶಿಫಾರಸು ಮಾಡಿದ್ದಾರೆ. 1900ರ ಪ್ಯಾರಿಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮೊದಲ ಬಾರಿಗೆ ಒಲಿಂಪಿಕ್ ಗೆ ಪಾದಾರ್ಪಣೆ ಮಾಡಿತು.
2028 ರ ಒಲಿಂಪಿಕ್ಸ್‌ನಲ್ಲಿ ಐದು ಹೊಸ ಕ್ರೀಡೆಗಳಲ್ಲಿ ಒಂದಾಗಿ ಕ್ರಿಕೆಟ್ ಅನ್ನು ಸೇರಿಸಲು LA ಸಂಘಟಕರ ಪ್ರಸ್ತಾಪವನ್ನು IOC ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಮುಂಬೈನಲ್ಲಿ ನಡೆದ ಕಾರ್ಯಕಾರಿ ಮಂಡಳಿಯ ಸಭೆಯ ಎರಡನೇ ದಿನದ ನಂತರ IOC ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ.
Advertisement. Scroll to continue reading.
2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಜೊತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್ (ನಾನ್-ಕಾಂಟ್ಯಾಕ್ಟ್ ಅಮೇರಿಕನ್ ಫುಟ್‌ಬಾಲ್), ಸ್ಕ್ವಾಷ್ ಮತ್ತು ಲ್ಯಾಕ್ರೋಸ್ ಸೇರಿದಂತೆ ನಾಲ್ಕು ಹೊಸ ಕ್ರೀಡೆಗಳನ್ನು ಸೇರಿಸಲಾಗುವುದು.