Connect with us

Hi, what are you looking for?

ಕರಾವಳಿ

ದಿಕ್ಸೂಚಿ ನ್ಯೂಸ್ ವರದಿ ಫಲಶ್ರುತಿ: ಬ್ರಹ್ಮಾವರ ಬಳಿ ತೆರೆದ ಬಾವಿಯಂತಿದ್ದ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ; ಇವರಿಗೆ ಸಾಥ್ ಕೊಟ್ಟ ಮೆಸ್ಕಾಂ ಸಿಬ್ಬಂದಿಗಳು, ಆಟೋ ಚಾಲಕರು

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಲ್ಲಿ ಮರಣಗುಂಡಿ ಕಣ್ಣುಮುಚ್ಚಿ ಕುಳಿತ ಹೆದ್ದಾರಿ ಇಲಾಖೆ ವರದಿಗೆ ಸ್ಪಂದನೆ 24 ಗಂಟೆಯಲ್ಲಿ
ಜನಸ್ನೇಹಿ ಪೊಲೀಸ್ ಸಿಬ್ಬಂದಿಯೊಬ್ಬರು ಗುಂಡಿಮುಚ್ಚಿ ಮಾದರಿಕಾರ್ಯ ಮೆರೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯೇ ಸರ್ವೀಸ್ ರಸ್ತೆಯಲ್ಲಿ ಕೃತಕ ತೆರೆದ ಬಾವಿ ಅಪಾಯಕ್ಕೆ ಕಾರಣವಾಗುತ್ತಿರುವ ಕುರಿತು ಸೋಮವಾರ ದಿಕ್ಸೂಚಿ ನ್ಯೂಸ್ ವರದಿ ಮಾಡಿ ಗಮನಸೆಳೆದಿತ್ತು.


ವರದಿಯನ್ನು ಕಂಡ ಬ್ರಹ್ಮಾವರ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಕಛೇರಿಯ ಸಿಬ್ಬಂದಿ ಶೇಖರ್ ಸೇರಿಗಾರ್ ನಿನ್ನೆ ಸಂಜೆಯೇ ಬ್ರಹ್ಮಾವರ ಮೆಸ್ಕಾಂನ ಸಿಬ್ಬಂದಿಗಳಾದ ಕಾರ್ತಿಕ್ ,ಪದ್ಮನಾಭ , ಚಂದ್ರ , ಮುತ್ತು ರವರೊಡಗೂಡಿ ಮರಳು, ಜಲ್ಲಿ ಕಲ್ಲು , ಸಿಮೆಂಟ್ ತಂದು ಗುಂಡಿಯನ್ನು ಸ್ವಚ್ಛಮಾಡಿ ಕಾಂಕ್ರೀಟ್ ಮಾಡಿ ಸಿಮೆಂಟ್ ರಸ್ತೆಯಂತೆ ಮಾಡಿದ್ದಾರೆ. ಹಾಗೂ ಇಲ್ಲಿನ ಅಟೋ ಚಾಲಕರೂ ಸಹಾ ಸೇರಿಕೊಂಡು ನೆರವಾಗಿದ್ದಾರೆ.


ಕರಾವಳಿ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮತ್ತು ಕಳಪೆ ಕಾಮಗಾರಿಗೆ ರಸ್ತೆ ಗುಂಡಿ ಬೀಳುವುದು ಸಾಮಾನ್ಯವಾಗಿದ್ದು ಸಂಬಂಧಪಟ್ಟವರೇ ಮಾಡಲಿ ಎಂದು ಕಾಯುವ ಬದಲು ಇಂತಹ ಕಾರ್ಯ ಮಾಡಿ ಮಾದರಿಯಾಗಿದ್ದಾರೆ ಹಾಗೂ ಸಾರ್ವಜನಿಕರ ಪ್ರಶಂಗೆ ಪಾತ್ರರಾಗಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!