WORLD CUP 2023: ಐಸಿಸಿ ಏಕದಿನ ವಿಶ್ವಕಪ್ನ ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಘಟನೆಯೊಂದು ನಡೆದಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದೊಡ್ಡ ತಪ್ಪು ಮಾಡಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೊಹ್ಲಿ ವಿಭಿನ್ನ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 191 ರನ್‌ಗಳ ಗುರಿ ಪಾಕ್ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ …….
ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮಾಡಿದ ದೊಡ್ಡ ತಪ್ಪು ಎಲ್ಲರ ಗಮನ ಸೆಳೆದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಪಾಕ್ ವಿಶ್ವಕಪ್ ಪಂದ್ಯದ ಆರಂಭದಲ್ಲಿ ಕೊಹ್ಲಿ ವಿಭಿನ್ನ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರು.
ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸೂಚಿಸುವ ಸಮಯದಲ್ಲಿ ಕೊಹ್ಲಿ ತ್ರಿವರ್ಣ ಪಟ್ಟೆಗಳಿರುವ ಜೆರ್ಸಿ ಬದಲಿಗೆ ಬಿಳಿ ಭುಜದ ಪಟ್ಟೆಗಳೊಂದಿಗೆ, ಅಂದರೆ ಭಾರತದ ಸಾಮಾನ್ಯ ಏಕದಿನ ಜೆರ್ಸಿಯನ್ನು ಧರಿಸಿರುವುದು ಕಂಡು ಬಂದಿದೆ. ಇದನ್ನು ಅಭಿಮಾನಿಗಳು ಗಮನಿಸಿದ್ದು, ಕೊಹ್ಲಿಯ ಫೋಟೋ ವೈರಲ್ ಆಗುತ್ತಿದೆ.
ಅಚ್ಚರಿ ಎಂದರೆ, ತಾನು ತಪ್ಪು ಜೆರ್ಸಿಯಲ್ಲಿ ಕಣಕ್ಕಿಳಿದಿರುವುದು ವಿರಾಟ್ ಕೊಹ್ಲಿ ಗಮನಕ್ಕೆ ಬಂದೇ ಇರಲಿಲ್ಲ. ಪಂದ್ಯ ಆರಂಭವಾಗಿ, ಪಾಕಿಸ್ತಾನ ತಂಡ ಬ್ಯಾಟಿಂಗ್ ಆರಂಭಿಸಿ ಒಂದು ಓವರ್ ಆದ ನಂತರ ಕೊಹ್ಲಿ ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗಿದ್ದಾರೆ. ನಂತರ ವಿಶ್ವಕಪ್ ಜೆರ್ಸಿ ತೊಟ್ಟು ಮೈದಾನಕ್ಕೆ ಬಂದರು.