WORLD CUP 2023 : ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವಿನ ನಗೆ ಬೀರಿದೆ.
ಭಾರತದ ಬೌಲಿಂಗ್ ದಾಳಿಗೆ ಮುಗ್ಗರಿಸಿ ಕೇವಲ 191 ರನ್‌ಗೆ ಪಾಕ್ ಆಲೌಟ್ ಆಯಿತು. ಆರಂಭದಲ್ಲಿ ದೊಡ್ಡ ಮೊತ್ತ ಕಲೆ ಹಾಕುವ ಸೂಚನೆ ನೀಡಿದ್ದ ಬಾಬರ್ ಪಡೆ ಕುಸಿತ ಕಂಡಿತು. ಆದ್ರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಬ್ಯಾಟಿಂಗ್‌ನಲ್ಲಿ ನೀಡಿದ ಕಳಪೆ ಪ್ರದರ್ಶನ ಸಖತ್ ಟ್ರೋಲ್ ಆಗುತ್ತಿದೆ.
ಪ್ರಸಿದ್ಧ ಕಾರು ಕಂಪನಿ ಎಮ್ಜಿ ಪಾಕಿಸ್ತಾನ ತಂಡವನ್ನು ಟ್ರೋಲ್ ಮಾಡಿದೆ. ತಮ್ಮ ಕಾರಿನ ಫೋಟೋ ಹಂಚಿಕೊಂಡು, “ಇದು ಪಾಕಿಸ್ತಾನ ಬ್ಯಾಟರ್ಗಳಿಗೆ ಪೆವಿಲಿಯನ್ಗೆ ತೆರಳಲು ಸಹಾಯ ಮಾಡಬಹುದು” ಎಂದು ಬರೆದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಪರ ಅಬ್ದುಲ್ ಶಫೀಖ್ ಹಾಗೂ ಇಮಾನ್ ಬಹಳ ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 8 ಓವರ್ ಆಗುವ ಹೊತ್ತಿಗೆ 41 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್‌ನಲ್ಲಿ ಶಫೀಖ್ (20) ಎಲ್ಬಿ ಬಲೆಗೆ ಸಿಲುಕಿದರು. ನಂತರ ಇಮಾಮ್ (36) ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಕೀಪರ್ ರಾಹುಲ್‌ಗೆ ಕ್ಯಾಚ್ ನೀಡಿ ಪೆಮಿಲಿಯನ್‌ನತ್ತ ಹೊರಟರು.
ಬಲಕಿಕ ಬಾಬರ್-ರಿಝ್ವಾನ್ ಜೋಡಿ 82 ರನ್‌ಗಳ ಕಲೆ ಹಾಕಿತು. ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಬಾಬರ್ ಅರ್ಧಶತಕ ಸಿಡಿಸಿದರು. ಆದರೆ, 50 ರನ್ ಗಳಿಸಿದ ಕೂಡಲೇ ಬಾಬರ್ ಅವರು ಸಿರಾಜ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೆ ಕುಲ್ದೀಪ್, ಸೌದ್ ಶಕೀಲ್ (6) ಅವರನ್ನು ಎಲ್ಬಿಡಬ್ಲ್ಯೂ ಮಾಡಿದರೆ, ಇಫ್ತಿಖರ್ ಅಹ್ಮದ್ರನ್ನು (4) ಬೌಲ್ಡ್ ಮಾಡಿದರು. ಅತ್ತ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ರಿಝ್ವಾನ್ 49 ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಶಬಾದ್ ಖಾನ್ ಕೂಡ 2 ರನ್ಗೆ ಔಟಾದರು.
155 ರನ್‌ಗೆ 3ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 171 ರನ್ ಆಗುವ ಹೊತ್ತಿಗೆ 7 ವಿಕೆಟ್ ಪತನಗೊಂಡಿತು. ಅಂತಿಮವಾಗಿ 42.5 ಓವರ್ಗಳಲ್ಲಿ 191 ರನ್‌ಗಳಿಗೆ ಆಲೌಟ್ ಆಯಿತು. ಭಾರತ ಪರ ಜಸ್ಪ್ರಿತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ 2 ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ್ದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ವಿಜಯದ ನಗೆ ಬೀರಿತು
ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರೋಹಿತ್ ಮಾತ್ರ ತಮ್ಮ ಅಬ್ಬರದ ಬ್ಯಾಟಿಂಗ್ ನಿಲ್ಲಿಸಲಿಲ್ಲ. 63 ಬೌಲ್‌ಗಳಲ್ಲಿ 86 ರನ್ ಚಚ್ಚಿ ಶತಕ ವಂಚಿತರಾದರು.
6 ಬೌಂಡರಿ ಹಾಗೂ 6 ಸಿಕ್ಸರ್‌ನ ಸಿಡಿಸಿ ರೋಹಿತ್ ಹೊಸ ದಾಖಲೆ ಬರೆದರು. ಶ್ರೇಯಸ್ ಐಯರ್ 53 ರನ್ ಮತ್ತು ರಾಹುಲ್ 19 ರನ್ ಗಳಿಸಿ ಔಟಾಗದೆ ಉಳಿದರು. 3 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿದ ಭಾರತ 7 ವಿಕೆಟ್ ಅಂತರದಲ್ಲಿ 30.3 ಓವರ್‌ನಲ್ಲಿ ಗೆದ್ದು ಬೀಗಿದೆ.