ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ :ಬ್ರಹ್ಮಾವರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸೋಮವಾರ ಬ್ರಹ್ಮಾವರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಂದಾಯ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ದಿನಂಪ್ರತಿ ನೂರಾರು ಮಂದಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಉಪ ನೋಂದಣಾಧಿಕಾರಿ ಕೀರ್ತಿ ಕುಮಾರಿಯವರಲ್ಲಿ ವಿಚಾರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನೂರಾರು ವರುಷದ ಹಳೆ ಕಚೇರಿಯಲ್ಲಿ ಮೂಲ ಸೌಕರ‍್ಯಗಳ ಕೊರತೆಯಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತಿದ್ದು, ತಕ್ಷಣವೇ ನೂತನ ಬ್ರಹ್ಮಾವರ ತಾಲೂಕು ಸೌಧಕ್ಕೆ ಸ್ಥಳಾಂತರಿಸಲು ಬೇಕಾದ ಸಮಸ್ಯೆಗೆ ಕೂಡಲೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಶಾಸಕರು ತಿಳಿಸಿದರು.
ರಾಜ್ಯ ರ‍್ಕಾರಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯ ತರುವ ನೋಂದಣಿ ಪ್ರಕ್ರಿಯೆಯ ಬಗ್ಗೆ ಇಲಾಖೆ ಸರ್ವರ್ ದೋಷ ಸೇರಿದಂತೆ ನಾನಾ ಸಮಸ್ಯೆ ಇಲ್ಲಿನ ಕಚೇರಿಯಲ್ಲಿರುವ ಕಾರಣ ನೂಥನ ತಾಲೂಕು ಸೌಧದಲ್ಲಿ ನೊಂದಣಿ ಕಛೇರಿ ಸಿದ್ದಗೊಂಡಿದ್ದು, ತಾಲೂಕು ಆಡಳಿತ ನೂಥನ ಸೌಧಕ್ಕೆ ವರ್ಗಾವಣೆ ಗೊಂಡರೂ ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರಗೊಂಡಿಲ್ಲವಾಗಿತ್ತು.
ಪ್ರಮುಖರಾದ ಹಂದಾಡಿ ಸುಧೀರ್ ಶೆಟ್ಟಿ, ಸಚಿನ್ ಪೂಜಾರಿ, ರಾಜು ಪೂಜಾರಿ, ಸಂತೋಷ್ ಜತ್ತನ್, ಗಣೇಶ್ ಕುಲಾಲ್, ಪ್ರದೀಪ್ ಬೈಕಾಡಿ ರಘುಪತಿ ಬ್ರಹ್ಮಾವರ ಮುಂತಾದವರು ಜೊತೆಯಲ್ಲಿದ್ದರು.