ನವದೆಹಲಿ: ಮಂಗಳವಾರ ನಡೆದ ಇಸ್ರೋ ಸಂಸ್ಥೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.
ಗಗನ್ ಯಾನ್ ಮಿಷನ್ ಭಾಗವಾಗಿ ಅ.21 ರಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 7 ರಿಂದ 9ವರೆಗೆ ಪರೀಕ್ಷಾ ವಾಹಕದ ಉಡಾವಣೆ ಮಾಡುವ ಮೂಲಕ ಗಗನ್ಯಾನ ಮಾನವ ರಹಿತ ಹಾರಾಟ ಪರೀಕ್ಷೆಯನ್ನು ನಡೆಸುವುದು ಹಾಗೂ ಇನ್ನಿತರ ಉಪಕ್ರಮಗಳ ಬಗ್ಗೆ ಇಸ್ರೋ ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
2025 ರಿಂದ 2040 ವರೆಗೆ ಸಾಧಿಸಬೇಕಿರುವ ಅಂಶಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.
2035 ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಿ 2040 ರ ವೇಳೆಗೆ ಚಂದ್ರನ ಮೇಲೆ ಓರ್ವ ಭಾರತೀಯನನ್ನು ಕಳಿಸುವ ಯೋಜನೆಗಳನ್ನು ಸಾಧಿಸಬೇಕು ಎಂದು ಪ್ರಧಾನಿ ಮೋದಿ ಇಸ್ರೋಗೆ ಹೇಳಿದ್ದಾರೆ.
ಭಾರತದ ಬಾಹ್ಯಾಕಾಶ ಪರಿಶೋಧನೆಯ ಪ್ರಯತ್ನಗಳ ಭವಿಷ್ಯವನ್ನು ವಿವರಿಸಿದರು ಮತ್ತು ವೀನಸ್ (ಶುಕ್ರ) ಆರ್ಬಿಟರ್ ಮಿಷನ್, ಮಾರ್ಸ್ ಲ್ಯಾಂಡರ್ ಸೇರಿದಂತೆ ಅಂತರಗ್ರಹ ಕಾರ್ಯಾಚರಣೆ ಹಾಗೂ ಚಂದ್ರನನ್ನು ಹೆಚ್ಚು ವಿವರವಾಗಿ ಅನ್ವೇಷಿಸುವೆಡೆಗೆ ಕೆಲಸ ಮಾಡಲು ವಿಜ್ಞಾನಿಗಳನ್ನು ಕೇಳಿದ್ದಾರೆ.
2035 ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣ (ಭಾರತೀಯ ಬಾಹ್ಯಾಕಾಶ ನಿಲ್ದಾಣ) 2040 ರ ವೇಳೆಗೆ ಚಂದ್ರನ ಮೇಲೆ ಭಾರತೀಯರನ್ನು ಕಳಿಸುವ ಮಹತ್ವಾಕಾಂಕ್ಷೆಯ ಯೋಜನೆಗಳ ಗುರಿಯನ್ನು ಭಾರತ ಹೊಂದಿರಬೇಕು ಎಂದು ಪ್ರಧಾನಿ ವಿಜ್ಞಾನಿಗಳಿಗೆ ಕರೆ ನೀಡಿದರು.
ಈ ದೃಷ್ಟಿಯನ್ನು ಸಾಕಾರಗೊಳಿಸಲು, ಬಾಹ್ಯಾಕಾಶ ಇಲಾಖೆಯು ಚಂದ್ರನ ಅನ್ವೇಷಣೆಗಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.