Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಐರನ್ ಡೋಮ್ ಬಳಿಕ ಈಗ ಐರನ್ ಬೀಮ್; ಏನಿದು ಹಮಾಸ್ ವಿರುದ್ಧ ಇಸ್ರೇಲ್ ವೆಪನ್?

1

ಟೆಲ್ ಅವಿವ್: ಇಸ್ರೇಲ್ ಮತ್ತು ಹಮಾಸ್ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಇಸ್ರೇಲ್‌ನ ರಕ್ಷಣಾ ಪಡೆ ಯದ್ಧಕ್ಕಾಗಿ ಲೇಸರ್ ಶಸ್ತ್ರಾಸ್ತ್ರವನ್ನು ಬಳಕೆ ಮಾಡಲು ಯೋಜಿಸಿರುವ ಬಗ್ಗೆ ವರದಿಯಾಗಿದೆ.

ಇಲ್ಲಿಯವರೆಗೆ ಇಸ್ರೇಲ್ ಐರನ್ ಡೋಮ್ ಅನ್ನು ಬಳಸುತ್ತಿತ್ತು. ಇದೀಗ ಇಸ್ರೇಲ್ ಐರನ್ ಬೀಮ್ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ವೇಗವಾಗಿ ತನ್ನತ್ತ ಚಲಿಸುವ ಕ್ಷಿಪಣಿ ಅಥವಾ ಸ್ಫೋಟಕಗಳನ್ನು ಶಕ್ತಿಯುತ ಲೇಸರ್ ಕಿರಣಗಳಿಂದ ನಾಶಪಡಿಸುವ ವ್ಯವಸ್ಥೆಯಾಗಿದೆ.

ಐರನ್ ಬೀಮ್ ಅನ್ನು 2025 ರಲ್ಲಿ ಇಸ್ರೇಲ್‌ನಲ್ಲಿ ಅಳವಡಿಸಲು ಯೋಜಿಸಲಾಗಿತ್ತು. ಆದರೆ ಇದೀಗ ಹಮಾಸ್ ಉಗ್ರರೊಂದಿಗೆ ಭೀಕರ ಯುದ್ಧ ಆರಂಭವಾಗಿರುವ ಹಿನ್ನೆಲೆ ಇಸ್ರೇಲಿ ರಕ್ಷಣಾ ಸಚಿವಾಲಯ ಅದನ್ನು ಶೀಘ್ರವಾಗಿ ನಿಯೋಜಿಸಲು ಯೋಜಿಸಿದೆ.

Advertisement. Scroll to continue reading.

ಇಸ್ರೇಲಿ ಪಡೆಗಳು ಈಗ ಐರನ್ ಬೀಮ್‌ನ ನಿಯೋಜನೆಯನ್ನು ವೇಗಗೊಳಿಸುತ್ತಿವೆ ಮತ್ತು ಪರೀಕ್ಷೆಗಳನ್ನು ಪ್ರಾರಂಭಿಸುತ್ತಿವೆ ಎಂದು ಇಸ್ರೇಲ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿವೆ.

ಐರನ್ ಬೀಮ್ ಎಂದರೆ:


ಐರನ್ ಬೀಮ್ ಅನ್ನು ಮೊದಲ ಬಾರಿಗೆ 2014 ರಲ್ಲಿ ಅನಾವರಣಗೊಳಿಸಲಾಯಿತು. ಆದರೆ ಇಸ್ರೇಲ್‌ನಲ್ಲಿ ಇದನ್ನು ಇನ್ನೂ ಅಳವಡಿಸಲಾಗಿಲ್ಲ. ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನಿರ್ಮಿಸಿದ ಐರನ್ ಬೀಮ್ ಸಿಸ್ಟಮ್ ಶಸ್ತ್ರಾಸ್ತ್ರ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಅದು ಶಕ್ತಿಯುತ ಬೆಳಕಿನ ಕಿರಣಗಳನ್ನು ಹಾಯಿಸುವ ಮೂಲಕ ಶತ್ರುಗಳ ಕ್ಷಿಪಣಿ ಅಥವಾ ಅಸ್ತ್ರಗಳನ್ನು ನಾಶಪಡಿಸುತ್ತದೆ. ಐರನ್ ಡೋಮ್ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ನಿರ್ಮಿಸಿದ ಇಸ್ರೇಲಿ ಮೊಬೈಲ್ ಆಲ್-ವೆದರ್ ಏರ್ ಡಿಫೆನ್ಸ್ ಸಿಸ್ಟಮ್ ಆಗಿದೆ. 

ಐರನ್ ಡೋಮ್‌ಗಿಂತ ಐರನ್ ಬೀಮ್ ಹೇಗೆ ಕೆಲಸ ಮಾಡುತ್ತೆ?

Advertisement. Scroll to continue reading.

ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯೊಂದಿಗೆ ಕೆಲಸ ಮಾಡಲು ಐರನ್ ಬೀಮ್ ಅನ್ನು ಅಗ್ಗದ ಮತ್ತು ಹೊಂದಿಕೊಳ್ಳುವ ಪರ್ಯಾಯವೆಂದು ಪರಿಗಣಿಸಲಾಗಿದೆ. ಇಸ್ರೇಲಿ ರಕ್ಷಣಾ ಸಚಿವಾಲಯದ ಕ್ಷಿಪಣಿ ರಕ್ಷಣಾ ತಜ್ಞರ ಪ್ರಕಾರ ಐರನ್ ಡೋಮ್‌ನಿಂದ ಹಾರಿಸಲಾಗುವ ಪ್ರತಿ ಪ್ರತಿಬಂಧಕಗಳ ಬೆಲೆ 60,000 ಡಾಲರ್ ವೆಚ್ಚವಾಗುತ್ತದೆ. ಆದರೆ ಐರನ್ ಬೀಮ್ ಅಗ್ಗದ ಬೆಲೆಯಲ್ಲಿ ಲೇಸರ್ ಕಿರಣವನ್ನು ಕಳುಹಿಸಿ, ದಾಳಿಯನ್ನು ತಡೆಯಬಹುದು. ಐರನ್ ಬೀಮ್ ಐರನ್ ಡೋಮ್‌ಗಿಂತ ಚಿಕ್ಕದು ಮತ್ತು ಹಗುರವೂ ಆಗಿದೆ. ಇದನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸಲು ಹಾಗೂ ಮರೆಮಾಡಲು ಸುಲಭವಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!