ಚಿಕ್ಕೋಡಿ: ಗರ್ಲ್ ಫ್ರೆಂಡ್ ಫೋಟೋ ನೋಡಿ ಅಶ್ಲೀಲವಾಗಿ ಮಾತನಾಡಿದ 8ನೇ ತರಗತಿ ಹುಡುಗನನ್ನು ಸ್ನೇಹಿತನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಿಪ್ಪಾಣಿಯ ಬಾಳುಮಾಮ ನಗರದಲ್ಲಿ ಶುಕ್ರವಾರ ನಡೆದಿದೆ.
ನಿಪ್ಪಾಣಿಯ ಹಳೆ ಸಂಭಾಜಿ ನಗರದ ಸಕೀಬ್ ಸಮೀರ್ ಪಠಾಣ್ (15) ಮೃತ ಬಾಲಕ, ಬಂಧಿತ ಝಬೀನ್ (20) ಎಂದು ಗುರುತಿಸಲಾಗಿದೆ.
ಮೃತ ಬಾಲಕ ಸಕೀಬ್ ಹಾಗೂ ಝಬೀನ್ ಇಬ್ಬರೂ ಸ್ನೇಹಿತರಾಗಿದ್ದರು. ಝಬೀನ್ ತನ್ನ ಸೆಲ್ ಫೋನ್‌ನಲ್ಲಿ ಸಮೀರ್‌ಗೆ ತನ್ನ ಗರ್ಲ್ ಫ್ರೆಂಡ್ ಫೋಟೋ ತೋರಿಸಿದ್ದಾನೆ. ಈ ವೇಳೆ ಸಮೀರ್ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಕುಪಿತಗೊಂಡಿರುವ ಝಬೀನ್, ಸಮೀರ್ ಜೊತೆಗೆ ಜಗಳವಾಡಿದ್ದಾನೆ.
Advertisement. Scroll to continue reading.
ಈ ಜಗಳ ವಿಕೋಪಕ್ಕೆ ತಿರುಗಿದ್ದು, ಸಮೀರ್ ತಲೆಗೆ ಮೇಲೆ ಝಬೀನ್ ಕಲ್ಲು ಎತ್ತಿಹಾಕಿದ್ದಾನೆ. ಇದೀಗ ಯುವಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.