Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಗಾಜಾಕ್ಕೆ ಭಾರತ ನೆರವಿನ ಹಸ್ತ; ಮಾನವೀಯ ನೆರವು ಕಳುಹಿಸಿದ ಭಾರತ

1

ನವದೆಹಲಿ : ಯುದ್ಧಪೀಡಿತ ಗಾಜಾಗೆ ಜಗತ್ತಿನ ಹಲವು ದೇಶಗಳು ಸಹಾಯಹಸ್ತ ಚಾಚುತ್ತಿವೆ‌ ಮಾನವೀಯ ಆಧಾರದ ಮೇಲೆ ಭಾರತ ಕೂಡ ವೈದ್ಯಕೀಯ ಅಗತ್ಯಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ರವಾನಿಸಿದೆ.

ಅ. 7ರಂದು ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ಗಾಜಾದಿಂದ ದಾಳಿ ನಡೆಸಿದ್ದರು. ಇದರ ವಿರುದ್ಧ ಸಮರ ಸಾರಿದ್ದು, ಗಾಜಾ ಒಳಗೆ ನುಗ್ಗಿ ಧ್ವಂಸ ಮಾಡುತ್ತಿದೆ.

ಯುದ್ಧದ ಪರಿಣಾಮ ಲಕ್ಷಾಂತರ ನಾಗರಿಕರು ನಿರ್ಗತಿಕರಾಗಿದ್ದು, ತನ್ನ ಮಿತ್ರ ಅಮೆರಿಕದ ಮನವಿ ಮೇರೆಗೆ ಅಲ್ಲಿನ ಜನರಿಗೆ ನೆರವು ಒದಗಿಸಲು ಇಸ್ರೇಲ್​ ಒಪ್ಪಿಕೊಂಡಿದೆ.

Advertisement. Scroll to continue reading.

ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳಲ್ಲಿ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಮಲಗುವ ಚೀಲಗಳು, ಟಾರ್ಪೌಲಿನ್‌ಗಳು, ನೈರ್ಮಲ್ಯ ಉಪಯುಕ್ತತೆಗಳು ಮತ್ತು ಇತರ ಅಗತ್ಯ ವಸ್ತುಗಳ ಜೊತೆಗೆ ನೀರು ಶುದ್ಧೀಕರಣ ಮಾತ್ರೆಗಳನ್ನು ಒಳಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

ಗಾಜಾವನ್ನು ಸಂಪೂರ್ಣ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್​ ಘೋಷಣೆ ಮಾಡಿದ್ದು, ನೀರು, ವಿದ್ಯುತ್​, ಇಂಧನ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ದೀರ್ಘಕಾಲ ಕೊರತೆಯನ್ನು ಸೃಷ್ಟಿಸುತ್ತಿದೆ.

ಇಸ್ರೇಲ್ ನಿಯಂತ್ರಣಕ್ಕೆ ಒಳಗಾಗದ ರಫಾ ಗಡಿ ಒಂದೇ ಗಾಜಾಗೆ ಇರುವ ಏಕೈಕ ಮಾರ್ಗವಾಗಿದೆ. ತಮ್ಮ ಮಿತ್ರ ದೇಶವಾಗಿರುವ ಯುನೈಟೆಡ್ ಸ್ಟೇಟ್ಸ್ ಮನವಿಯ ಮೇರೆಗೆ ಈಜಿಪ್ಟ್‌ನಿಂದ ಗಾಜಾಗೆ ನೆರವು ಸಾಗಿಸಲು ಇಸ್ರೇಲ್ ಅನುಮತಿಸಿದೆ. ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳು ರಫಾ ಗಡಿಯ ಮೂಲಕ ಗಾಜಾಗೆ ತಲುಪಲಿದೆ.

ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಂದ ಬಂದ ನೆರವನ್ನು ಗಾಜಾಗೆ ತಲುಪಿಸುವ ಜವಾಬ್ದಾರಿಯನ್ನು ಈಜಿಪ್ಟಿನ ರೆಡ್ ಕ್ರೆಸೆಂಟ್‌ ಕಚೇರಿಯು ಹೊತ್ತಿದೆ. ನಿನ್ನೆ ಇಪ್ಪತ್ತು ಟ್ರಕ್‌ಗಳು ಈಜಿಪ್ಟಿನ ಟರ್ಮಿನಲ್ ಅನ್ನು ಪ್ರವೇಶಿಸಿದ್ದವು. ಪ್ಯಾಲೆಸ್ತೀನ್​ ಕಡೆಯ 36 ಖಾಲಿ ಟ್ರೇಲರ್‌ಗಳು ಟರ್ಮಿನಲ್‌ಗೆ ಪ್ರವೇಶಿಸಿ ಈಜಿಪ್ಟಿನ ಕಡೆಗೆ ಹೋಗಿ, ನೆರವನ್ನು ಲೋಡ್ ಮಾಡಿಕೊಂಡು ರಫಾ ಗಡಿಯ ಮೂಲಕ ಗಾಜಾಗೆ ತೆರಳಿದವು.

Advertisement. Scroll to continue reading.

ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ರೂಜ ಶುಕ್ರವಾರ ಈಜಿಪ್ಟ್ ಕ್ರಾಸಿಂಗ್ ಬದಿಗೆ ಭೇಟಿ ನೀಡಿ ನೆರವು ವಿತರಣೆಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದರು. ಇವು ಕೇವಲ ಟ್ರಕ್‌ಗಳಲ್ಲ, ಜೀವರಕ್ಷಕಗಳು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!