Connect with us

Hi, what are you looking for?

Diksoochi News

ರಾಷ್ಟ್ರೀಯ

ಗುಜರಾತ್ ಗರ್ಬಾ ಪ್ರದರ್ಶನ ವೇಳೆ ಹೃದಯಾಘಾತಕ್ಕೆ 24 ಗಂಟೆಯಲ್ಲಿ 10 ಮಂದಿ ಬಲಿ

2

ಸೂರತ್: ನವರಾತ್ರಿ ಸಂಭ್ರಮಾಚರಣೆಯ ವೇಳೆ ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಗರ್ಬಾ ನೃತ್ಯ ಪ್ರದರ್ಶಿಸುವಾಗ ಕನಿಷ್ಠ 10 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಣ್ಣ ವಯಸ್ಸಿನಿಂದ ಹಿಡಿದು ಮಧ್ಯ ವಯಸ್ಸಿನ ವರೆಗಿನ ಜನರು ಬಲಿಯಾಗಿದ್ದಾರೆ. ಬರೋಡಾದ ದಭೋಯಿಯಲ್ಲಿ 13 ವರ್ಷದ ಬಾಲಕ ಅಸು ನೀಗಿದ್ದಾನೆ ಎಂದು ತಿಳಿದುಬಂದಿದೆ.

ಅಹಮದಾಬಾದ್‌ನಲ್ಲಿ ಶುಕ್ರವಾರ 24 ವರ್ಷದ ಯುವಕ ಗರ್ಬಾ ಪ್ರದರ್ಶಿಸುವಾಗ ಹಠಾತ್ತನೆ ಕುಸಿದು ಬಿದ್ದಿದ್ದಾನೆ. ಅದೇ ರೀತಿ ಕಪಾಡ್ವಂಜ್‌ನಲ್ಲಿ 17 ವರ್ಷದ ಬಾಲಕ ಕೂಡ ಗರ್ಬಾ ನರ್ತನದ ವೇಳೆ ಕುಸಿದುಬಿದ್ದು ಸಾವಿಗೀಡಾಗಿದ್ದಾನೆ. ಹಿಂದಿನ ದಿನ ಕೂಡ ರಾಜ್ಯದ ವಿವಿಧೆಡೆ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.

ನವರಾತ್ರಿಯ ಮೊದಲ ಆರು ದಿನಗಳಲ್ಲಿ 108 ತುರ್ತು ಸೇವಾ ಆಂಬುಲೆನ್ಸ್ ಸೇವೆಗೆ ಹೃದಯ ಸಂಬಂಧಿ ಸಮಸ್ಯೆಗಳಿಗಾಗಿ 521 ಕರೆಗಳು ಬಂದಿದ್ದವು. ಅಲ್ಲದೆ, ಉಸಿರಾಟ ಸಮಸ್ಯೆ ಕುರಿತು 609 ಕರೆಗಳು ಬಂದಿದ್ದವು. ಈ ಕರೆಗಳು ಸಂಜೆ 6 ರಿಂದ ನಸುಕಿನ 2 ಗಂಟೆ ನಡುವೆ ದಾಖಲಾಗಿದ್ದವು. ಇದು ಗರ್ಬಾ ನೃತ್ಯ ನಡೆಯುವ ಸಮಯವಾಗಿದೆ.

Advertisement. Scroll to continue reading.

ಎಚ್ಚೆತ್ತ ಸರ್ಕಾರ; ಹೈ ಅಲರ್ಟ್ :

ಈ ಆಘಾತಕಾರಿ ಬೆಳವಣಿಗೆಯು ಸರ್ಕಾರ ಹಾಗೂ ಗರ್ಬಾ ನೃತ್ಯ ಆಯೋಜಕರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.

ಗರ್ಬಾ ನಡೆಯುವ ಸ್ಥಳಗಳ ಸಮೀಪದಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ (ಸಿಜಿಎಚ್) ರಾಜ್ಯ ಸರ್ಕಾರ ಸೂಚನೆ ಹೊರಡಿಸಿದೆ. ಅಲ್ಲದೇ, ಹೈ ಅಲರ್ಟ್‌ನಿಂದ ಇರುವಂತೆ ಮನವಿ ಮಾಡಿದೆ.

ಅಂತಹ ಯಾವುದೇ ತುರ್ತು ಸನ್ನಿವೇಶ ಎದುರಾದರೂ, ರೋಗಿಗಳನ್ನು ಕಾರ್ಯಕ್ರಮ ಸ್ಥಳದಿಂದ ತ್ವರಿತವಾಗಿ ಕರೆದುಕೊಂಡು ಹೋಗಲು ಆಂಬುಲೆನ್ಸ್‌ಗಳು ಸುಗಮವಾಗಿ ಬರಲು ಅನುವಾಗುವಂತೆ ಕಾರಿಡಾರ್‌ಗಳನ್ನು ನಿರ್ಮಿಸಲು ಗರ್ಬಾ ಆಯೋಜಕರಿಗೆ ಕೂಡ ಸೂಚಿಸಲಾಗಿದೆ.

Advertisement. Scroll to continue reading.

ಈ ನಡುವೆ ಗರ್ಬಾ ಆಯೋಜಕರು ನೃತ್ಯ ಪ್ರದರ್ಶನಗಳಲ್ಲಿ ಭಾಗಿಯಾಗುವ ಎಲ್ಲರ ಸುರಕ್ಷತೆಗಾಗಿ ವೈದ್ಯರು ಹಾಗೂ ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸುತ್ತಿದ್ದಾರೆ. ತಮ್ಮ ಸಿಬ್ಬಂದಿಗೆ ಸಿಪಿಆರ್ ನೀಡುವ ತರಬೇತಿ ಕೊಡಿಸುವಂತೆ ಹಾಗೂ ಭಾಗಿಯಾಗುವವರಿಗೆ ಸಾಕಷ್ಟು ನೀರು ಲಭ್ಯವಾಗುವಂತೆ ನೋಡಿಕೊಳ್ಳಲು ಆಯೋಜಕರಿಗೆ ಸೂಚನೆ ನೀಡಲಾಗಿದೆ.

ಈ ವರ್ಷದ ನವರಾತ್ರಿ ಹಬ್ಬ ಆರಂಭಕ್ಕೂ ಮುನ್ನ, ಗರ್ಬಾ ಅಭ್ಯಾಸದ ವೇಳೆ ಗುಜರಾತ್‌ನಲ್ಲಿ ಮೂವರು ಹೃದಯಾಘಾತದಿಂದ ಮತಪಟ್ಟಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!