ಕುಂದಾಪುರ: ಮೈಮೇಲೆ ಮೇಣದ ಬತ್ತಿ ಬಿದ್ದು ನೈಟಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಮೊಂತಿ ಪಿರೇರಾ(76) ಮೃತಪಟ್ಟ ವೃದ್ಧೆ.
ಮನೆಯಲ್ಲಿ ಕರೆಂಟ್ ಹೋದ ಕಾರಣ ಮೇಣದ ಬತ್ತಿ ಹಚ್ಚಿ ಟೇಬಲ್ ಮೇಲಿಡಲಾಗಿತ್ತು. ಮೊಂತಿ ಫಿರೇರಾರವರು ಊಟ ಮಾಡುವಾಗ ಮೇಣದ ಬತ್ತಿಯು ಆಕಸ್ಮಿಕವಾಗಿ ಮೈಮೇಲೆ ಬಿದ್ದು, ಅವರು ಧರಿಸಿದ ನೈಟಿಗೆ ಬೆಂಕಿ ತಗುಲಿ ಸುಟ್ಟ ಗಾಯವಾಗಿದೆ. ನಂತರ ಅವರನ್ನು ಸರ್ಜನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ವಾಪಾಸ್ಸು ಮನೆಗೆ ಕರೆದುಕೊಂಡು ಬಂದಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಅ.17 ರಂದು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಅಲ್ಲಿನ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆಯಲ್ಲಿದ್ದ ಮೊಂತಿ ಪಿರೇರಾರವರು ದಿನಾಂಕ ಅ.22 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.