Connect with us

Hi, what are you looking for?

Diksoochi News

ರಾಜ್ಯ

ಶಿವಮೊಗ್ಗ : ಜಂಬೂ ಸವಾರಿಗೆ ಬಂದಿದ್ದ ನೇತ್ರಾವತಿ ಆನೆಗೆ ಹೆರಿಗೆ

1

ಶಿವಮೊಗ್ಗ : ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಾಲೀಮು ನಡೆಸಿದ್ದ 28 ವರ್ಷದ ನೇತ್ರಾವತಿ ಆನೆಯು ಹೆಣ್ಣು ಮರಿಗೆ ಜನ್ಮ ನೀಡಿದೆ.

ಕೆಲವು ವರ್ಷಗಳಿಂದ ಶಿವಮೊಗ್ಗ ದಸರಾದಲ್ಲಿ ಬೆಳ್ಳಿ ಅಂಬಾರಿ ಹೊರಲು ಮೂರು ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯು ಅಂಬಾರಿ ಹೊರುವ ಸಾಗರನ ಜತೆ ಯಾವ ಅನೆಗಳನ್ನು ಕಳುಹಿಸಬೇಕು ಎಂದು ಗೊಂದಲ ಮೂಡಿತ್ತು. ಕುಂತಿ ಈಚೆಗೆ ಮರಿ ಹಾಕಿತ್ತು. ಭಾನುಮತಿ ತುಂಬು ಗರ್ಭಿಣಿಯಾಗಿತ್ತು. ಹಾಗಾಗಿ ಸಾಗರ ಆನೆ ಜತೆ ನೇತ್ರಾವತಿ, ಹೇಮಾವತಿ ಆನೆಗಳನ್ನು ಕಳುಹಿಸಲಾಗಿತ್ತು.

ಪ್ರತಿ ವರ್ಷದಂತೆ ಈ ವರ್ಷವು ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನಡೆಯುತ್ತಿದೆ. ಶಿವಮೊಗ್ಗ ಪಾಲಿಕೆ ಮೇಯರ್ ಮನವಿ ಬೆನ್ನಲ್ಲೆ ಸಕ್ರೈಬೈಲು ಬಿಡಾರದಿಂದ 3 ಪಳಗಿದ ಆನೆಗಳನ್ನು ಇಲ್ಲಿನ ದಸರಾ ಕಳುಹಿಸಲು ಅರಣ್ಯ ಸಚಿವರಿಂದ ಒಪ್ಪಿಗೆ ದೊರೆತಿತ್ತು. ಅದರಂತೆ ಸಾಗರ್ (ಗಂಡಾನೆ), ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಹಬ್ಬಕ್ಕೂ ಮೊದಲೇ ಮಲೆನಾಡಿನ ಜಿಲ್ಲೆಗೆ ಬಂದು ಇಲ್ಲಿನ ವಾಸವಿ ಶಾಲಾ ಆವರಣದಲ್ಲಿ ನೆಲೆಸಿದ್ದವು. ಅಗತ್ಯ ತಾಲೀಮು ಸಹ ನಡೆಸಲಾಗಿತ್ತು.

Advertisement. Scroll to continue reading.

ಮೂರು ದಿನದ ಹಿಂದೆ ಶಿವಮೊಗ್ಗ ನಗರಕ್ಕೆ ಕರೆತಂದು ಮೆರವಣಿಗೆ ಮಾರ್ಗದಲ್ಲಿ ಬೆಳಗ್ಗೆ ಸಂಜೆ ತಾಲೀಮು ನಡೆಸಲಾಗುತಿತ್ತು. ನಿನ್ನೆ ಸಂಜೆ ಕೂಡ ತಾಲೀಮು ಮುಗಿಸಿ ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿದ್ದವು. ರಾತ್ರಿ 10 ಗಂಟೆ ಸುಮಾರಿಗೆ ನೇತ್ರಾವತಿ ಮರಿಗೆ ಜನ್ಮ ನೀಡಿದ್ದಾಳೆ.

ಪ್ರೆಗ್ನೆನ್ಸಿ ಟೆಸ್ಟ್ ವೇಳೆ ನೆಗೆಟಿವ್ ಕಂಡು ಬಂದಿದ್ದರಿಂದ ಜಂಬೂ ಸವಾರಿಗೆ ಆಯ್ಕೆ ಮಾಡಲಾಗಿತ್ತು. ಮೈಸೂರು ದಸರಾಗೆ ಆನೆ ಆಯ್ಕೆ ವೇಳೆ ಸಕ್ರೇಬೈಲಿನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ನಡೆಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ, ಶಿವಮೊಗ್ಗ ದಸರಾ ಕಾರಣಕ್ಕಾಗಿಯೇ ಮೈಸೂರು ದಸರಾಗೆ ನೇತ್ರಾ ಆನೆ ಕಳಿಸಲು ನಿರಾಕರಿಸಲಾಗಿತ್ತು. ಸದ್ಯ ನೇತ್ರಾ ಆನೆಯನ್ನು ಸಕ್ರೆಬೈಲಿನ ಆನೆ ಬಿಡಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!