ಬೆಳ್ತಂಗಡಿ: ಸವಣಾಲು ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಸಂಪನ್ನಗೊಂಡಿತು. ಪ್ರತಿದಿನ ಚಂಡಿಕಾಹೋಮ ಹಾಗೂ ಅನ್ನಸಂತರ್ಪಣೆ ನಡೆಯಿತು.
ಶಾರದಾ ಪೂಜೆ ಪ್ರಯುಕ್ತ ಕ್ಷೇತ್ರದಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸಿ, ಅಕ್ಷರಾಭ್ಯಾಸ ಕಾರ್ಯಕ್ರಮ ನೆರವೇರಿತು. ಅಷ್ಟಮಿಯ ದಿನ ಕಾಳಿಗುಡಿಯಲ್ಲಿ ಬೆಳಗ್ಗೆ ತೆನೆ ಪೂಜೆ, ಕಾಳಿಕಾಂಬ ದೇವಿಗೆ ಮದ್ಯಾಹ್ನ ವಿಶೇಷ ಪೂಜೆ ಹಾಗೂ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ಹಾಗೂ ಅಷ್ಟಾವದಾನ ಸೇವೆ ನಡೆಯಿತು. ಗಜಾನನ ಭಟ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.
Advertisement. Scroll to continue reading.
ನವರಾತ್ರಿಯ ನವಮಿಯ ದಿನ ಮೂಲ ದುರ್ಗಾ ಗುಡಿಯಲ್ಲಿ ರಾತ್ರಿ ರಂಗ ಪೂಜೆ ಹಾಗೂ ಅಷ್ಟಾವಧಾನ ಸೇವೆ, ವಾಹನ ಪೂಜೆ ನಡೆಯಿತು. ವಿಜಯ ದಶಮಿ ದಿನ ಸಾರ್ವಜನಿಕ ಚಂಡಿಕಾಹೋಮ ಹಾಗೂ ರ ಅನ್ನಸಂತರ್ಪಣೆ ಹಾಗೂ ರಾತ್ರಿ ಶಾರದಾ ವಿಸರ್ಜನೆ ಹಾಗೂ ಶಮೀ ಪೂಜೆಯೊಂದಿಗೆ ನವರಾತ್ರಿ ಉತ್ಸವ ಸಮಾಪ್ತಿಗೊಂಡಿತು.