WORLDCUP 2023: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ.
ಟಾಸ್ ಗೆದ್ದು ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲು ಆಘಾತ ಅನುಭವಿಸಿತು. 40 ರ್‌ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡು ನಿರಾಸೆ ಹುಟ್ಟಿಸಿತ್ತು.
ಶುಬ್ ಮನ್ ಗಿಲ್ 9 ರನ್ ಗೆ ಔಟಾದರೆ, ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಶ್ರೇಯಸ್ ಐಯ್ಯರ್ 4 ರನ್ ಗಳಿಸಿದರು. ಮೂರು ವಿಕೆಟ್ ಬೇಗ ಪತನದ ನುಡುವೆಯೂ ಇಂಗ್ಲಂಡ್ ಆಕ್ರಮಣಕಾರಿ ಬೌಲಿಂಗ್ ಎದುರು ನಾಯಕ ರೋಹಿತ್ ಶರ್ಮಾ ತಂಡದ ಮೊತ್ತ ಹೆಚ್ಚಿಸಲು ಮುಂದಡಿ ಇಟ್ಟರು. ಇವರಿಗೆ ಸಾಥ್ ಕೊಟ್ಟ ಕೆ ಎಲ್ ರಾಹುಲ್ 39 ರನ್ ಗಳಿಸಿದರು ಹೊರತಾಗಿ, ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ರೋಹಿತ್ ವಿಕೆಟ್ ಪತನ ನಂತರ ಭಾರತದ ಮೊತ್ತ ನಿಧಾನಗತಿಯಲ್ಲಿ ಸಾಗಿತು. ಸೂರ್ಯ ಕುಮಾರ್ ಯಾದವ್ ಭರವಸೆ ಹುಟ್ಟಿಸಿದರು. 49 ರನ್ ಗಳಿಸಿದ ಸೂರ್ಯ ಕುಮಾರ್ ಯಾದವ್ ಅರ್ಧ ಶತಕ ವಂಚಿತರಾದರು. ರವೀಂದ್ರ ಜಡೇಜಾ 8 ಮುಹಮ್ಮದ್ ಶಮಿ 1 ರನ್, ಬೂಮ್ರಾ 16 ರನ್ ಗಳಿಸಿ ಔಟ್ ಆದರು.ಕುಲ್ ದೀಪ್ ಯಾದವ್ 9 ರನ್ ಗಳಿಸಿದರು. ಒಟ್ಟಾರೆ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಲು ಸಾಧ್ಯವಾಯಿತು.
ಇನ್ನು ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಭಾರತ ಶಕ್ತವಾಯಿತು. ಆರಂಭದಲ್ಲೇ ಘಟಾನುಘಟಿಗಳ ವಿಕೆಟ್ ಕಳಕೊಂಡ ಇಂಗ್ಲೆಂಡ್ 34.5 ಓವರ್‌ಗೆ 129ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು.