Connect with us

Hi, what are you looking for?

Diksoochi News

ರಾಷ್ಟ್ರೀಯ

ಭಯ ಬೇಡ: ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ.‌..

0

ನವದೆಹಲಿ : ದೇಶದಲ್ಲಿ ಹಠಾತ್ ಹೃದಯಾಘಾತ ಪ್ರಕರಣ ಹೆಚ್ಚುತ್ತಿದೆ. ಇದು ಸಹಜವಾಗಿಯೇ ಜನರಲ್ಲಿ ಭಯ ಮೂಡಿಸಿದೆ. ಈ ಬಗ್ಗೆ ದೇಶಾದ್ಯಂತ ಕೊರೋನಾ ಲಸಿಕೆ ಮೇಲೆ ಅನುಮಾನ ವ್ಯಕ್ತ ಪಡಿಸಲಾಗಿತ್ತು. ಲಸಿಕೆಯಿಂದಾಗಿಯೇ ಹೃದಯಾಘಾತ ಸಂಭವಿಸುತ್ತಿದೆ ಎಂದು ಜನರು ಆತಂಕಪಟ್ಟಿದ್ದರು ಹಾಗೂ ಈ ಬಗ್ಗೆ ಅಧ್ಯಯನ ನಡೆಸಲು ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಈ ಎಲ್ಲ ಗೊಂದಲಕ್ಕೆ ಉತ್ತರ ಸಿಕ್ಕಿದೆ.

ಹೌದು, ಕೋವಿಡ್ ಲಸಿಕೆ ಯುವಕರಲ್ಲಿ ಹಠಾತ್ ಹೃದಯಾಘಾತ ಉಂಟು ಮಾಡುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ನಡೆಸಿರುವ ಅಧ್ಯಯನ ಸ್ಪಷ್ಟ ಪಡಿಸಿದೆ.

 ‘ಕೋವಿಡ್‌ ಲಸಿಕೆಯಿಂದ ದೇಶದಲ್ಲಿ 18 ರಿಂದ 45 ವರ್ಷದ ವಯೋಮಾನದವರಲ್ಲಿ ಹಠಾತ್‌ ಸಾವಿನ ಅಪಾಯದ ಸಾಧ್ಯತೆ ಹೆಚ್ಚಿಲ್ಲ’ ಎಂದು ಐಸಿಎಂಆರ್‌ ಅಧ್ಯಯನ ತಿಳಿಸಿ.

Advertisement. Scroll to continue reading.

ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಅತಿಯಾದ ಕುಡಿತ ಹಾಗೂ ಅತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇ ಅವರ ಸಾವಿಗೆ ಮೂಲ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.

‘ಈ ಅಧ್ಯಯನದ ವರದಿಯು ಇನ್ನು ಪರಿಶೀಲನೆಯಲ್ಲಿದ್ದು, ಇನ್ನಷ್ಟೆ ಪ್ರಕಟವಾಗಬೇಕಾಗಿದೆ. ಅಧ್ಯಯನ ಪ್ರಕ್ರಿಯೆಯು ಇದೇ ತಿಂಗಳು ಪೂರ್ಣಗೊಂಡಿದೆ’ ಎಂದು ಐಸಿಎಂಆರ್‌ನ ಮೂಲಗಳು ತಿಳಿಸಿವೆ.

ತನಿಖೆಗೆ ಮುಂದಾದ ಐಸಿಎಂಆರ್ :

ಐಸಿಎಂಆರ್ ಅಧ್ಯಯನ ಉಲ್ಲೇಖಿಸಿ ಗುಜರಾತ್‌ನ ಭಾವ್‌ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ‘ಕೋವಿಡ್‌ನಿಂದ ಬಾಧಿತರಾಗಿದ್ದವರು ಕನಿಷ್ಠ ಒಂದೆರಡು ವರ್ಷ ಅತಿಯಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದಿತ್ತು. ಇದರಿಂದ ಹಠಾತ್ ಹೃದಯಾಘಾತ ಹಾಗೂ ಹೃದಯಸ್ತಂಭನ ತಪ್ಪಿಸಬಹುದಿತ್ತು’ ಎಂದು ಹೇಳಿದ್ದರು.

Advertisement. Scroll to continue reading.

ಆರೋಗ್ಯವಂತ ಯುವಜನರ ಅಕಾಲಿಕ ಮರಣದ ವರದಿಗಳಿಂದಾಗಿ ಸಂಶೋಧಕರು ವಸ್ತುಸ್ಥಿತಿ ತನಿಖೆಗೆ ಮುಂದಾಗಿದ್ದರು. ಹಠಾತ್ ಸಾವುಗಳ ಕುರಿತು ಕಳವಳ ಕೇಳಿಬಂದಿದ್ದು, ಕೋವಿಡ್‌ ಲಸಿಕೆಯು ಕಾರಣ ಇರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಅಕಾಲಿಕ ಸಾವು ಪ್ರಕರಣ ಅಧ್ಯಯನ :  

ಆರೋಗ್ಯವಂತ ಯುವಜನರ ಹಠಾತ್‌ ಸಾವುಗಳಿಗೆ ಕಾರಣ ತಿಳಿಯಲು ಈ ಅಧ್ಯಯನ ನಡೆಸಲಾಗಿತ್ತು. 2021ರ ಅ.1 ಮತ್ತು 2023ರ ಮಾರ್ಚ್‌ 31ರ ನಡುವೆ ಸಂಭವಿಸಿದ್ದ 18ರಿಂದ 45 ವರ್ಷ ವಯೋಮಾನದ, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ವ್ಯಕ್ತಿಗಳ ಅಕಾಲಿಕ ಸಾವಿನ ಪ್ರಕರಣಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿತ್ತು.

ವಯಸ್ಸು, ಲಿಂಗ, ಸ್ಥಳ ಕುರಿತ ಅಂಶಗಳ ಆಧಾರದಲ್ಲಿ 729 ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗಿತ್ತು. ಮೃತರ ವೈದ್ಯಕೀಯ ಹಿನ್ನೆಲೆ, ವರ್ತನೆ (ಧೂಮಪಾನ, ಮದ್ಯಪಾನ, ಅತಿಯಾದ ದೈಹಿಕ ಶ್ರಮ), ಕೋವಿಡ್‌ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಹಾಗೂ ಅವರಿಗೆ ಕೋವಿಡ್‌ ಲಸಿಕೆ ನೀಡಲಾಗಿತ್ತೆ ಎಂಬ ವಿವರಗಳನ್ನು ಕಲೆಹಾಕಲಾಗಿತ್ತು. 

Advertisement. Scroll to continue reading.

ಅಂತಿಮವಾಗಿ, ಭಾರತದಲ್ಲಿ ಈ ವಯೋಮಾನದವರಲ್ಲಿ ಹಠಾತ್ ಸಾವಿನ ಸಾಧ್ಯತೆ ಹೆಚ್ಚಳಕ್ಕೆ ಕೋವಿಡ್ ಲಸಿಕೆಯು ಕಾರಣವಾಗಿಲ್ಲ. ವಾಸ್ತವವಾಗಿ ಕೋವಿಡ್‌ ಲಸಿಕೆಯು ವಯಸ್ಕರಲ್ಲಿ ಸಾವಿನ ಸಾಧ್ಯತೆಗಳನ್ನು ಕುಗ್ಗಿಸಿದೆ ಎಂದು ಅಧ್ಯಯನ ವರದಿ ಹೇಳಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!