Connect with us

Hi, what are you looking for?

Diksoochi News

ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ; ಮಗು ಸೇರಿ 5 ಮಂದಿ ಸಾವು

1

ಉತ್ತರಪ್ರದೇಶ : ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿರುವ ಘಟನೆ ಹರ್ದೋಯನ ಕೊಟ್ಟಲಿ ಬಳಿ ನಡೆದಿದೆ. ಬೊಲೆರೋ ವಾಹನದಲ್ಲಿದ್ದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.

ಮೃತರನ್ನು ಹೋಶಿಯಾರ್ ಸಿಂಗ್(55), ಮುಖೇಶ್ (30), ಮೊಮ್ಮಗ ಬಲ್ಲು (4), ಕುಟುಂಬದ ರಾಜಾರಾಂ ಮತ್ತು ಸೋದರಳಿಯ ಮನೋಜ್ ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹರ್ದೋಯ್‌ನ ಸವಯಜ್‌ಪುರ ಕೊಟ್ವಾಲಿ ಪ್ರದೇಶದ ಬಿಲ್‌ಹೌರ್-ಕತ್ರಾ ರಸ್ತೆಯ ಖಮಾರಿಯಾ ತಿರುವಿನ ಬಳಿ ಘಟನೆ ನಡೆದಿದೆ.

Advertisement. Scroll to continue reading.

ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತರು ಪಚ್‌ದೇವ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಕಾಂತ್ ಗ್ರಾಮದವರಾಗಿದ್ದು, ಒಂದೇ ಕುಟುಂಬದವರು ಎನ್ನಲಾಗಿದೆ.

ಕಾರಿನಲ್ಲಿ ಪತ್ತೆಯಾದ ಮೊಬೈಲ್ ಫೋನ್ ಸಹಾಯದಿಂದ ಕುಟುಂಬ ಸದಸ್ಯರಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಲಾಗಿದೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಎಸ್ಪಿ, ಎಎಸ್ಪಿ ಹಾಗೂ ಹಲವು ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!