ಬೆಂಗಳೂರು: ಹುಲಿ ಉಗುರಿನ ವಿಚಾರವಾಗಿ ದರ್ಶನ್ ಹೆಸರು ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ದರ್ಶನ್ ಅವರ ಮನೆಯ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದೆ. ಈ ಬಗ್ಗೆ ಆಕೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಆರ್.ಆರ್. ನಗರದಲ್ಲಿರುವ ದರ್ಶನ್ ಅವರ ಮನೆಯ ಬಳಿ ನಾಯಿ ಮಹಿಳೆ ಮೇಲೆ ದಾಳಿ ಮಾಡಿ ಹೊಟ್ಟೆ ಮೊದಲಾದ ಭಾಗಕ್ಕೆ ಕಚ್ಚಿದೆ.
ಆರ್ ಆರ್ ನಗರದಲ್ಲಿರುವ ದರ್ಶನ್ ಮನೆಯ ಪಕ್ಕ ಮಹಿಳೆ ಕಾರ್ ಪಾರ್ಕ್ ಮಾಡಿದ್ದರು. ವಾಪಸ್ ಹೋಗುವಾಗ ಕಾರ್ ಬಳಿ ಮೂರು ನಾಯಿಗಳು ಕಂಡು ಬಂದಿವೆ. ಅವುಗಳನ್ನು ಪಕ್ಕಕ್ಕೆ ಸರಿಸುವಂತೆ ದರ್ಶನ್ ಕಡೆಯ ಹುಡುಗರಿಗೆ ಮಹಿಳೆ ಹೇಳಿದ್ದಾರೆ. ಈ ವೇಳೆ ಮಹಿಳೆ ಮತ್ತು ದರ್ಶನ್ ಹುಡುಗರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಪಾರ್ಕಿಂಗ್ ವಿಚಾರವಾಗಿ ಅವರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಮಹಿಳೆಗೆ ದರ್ಶನ್ ಅವರ ನಾಯಿ ಕಚ್ಚಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅಂದಹಾಗೇ ಇತ್ತೀಚೆಗಷ್ಟೇ ದರ್ಶನ್ ವಿರುದ್ಧ ಹುಲಿ ಉಗುರು ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ನೋಟಿಸ್ ನೀಡಿ ಮನೆಯಲ್ಲಿ ಶೋಧ ಕೂಡ ನಡೆಸಿದ್ದರು.