ನವದೆಹಲಿ : ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿದೆ. ಈ ಬಗ್ಗೆ ಪಾಕಿಸ್ತಾನಿ ಅಭಿಮಾನಿಗಳು ಬಹಳ ಅವಮಾನಿತರಾಗಿದ್ದಾರೆ. ಹೀಗಾಗಿ ಭಾರತದ ಗೆಲುವಿನ ಕುರಿತು ಕುಚೋದ್ಯ ಮಾಡುತ್ತಿದ್ದರು. ಆದರೆ ಗುರುವಾರ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 302 ರನ್‌ಗಳಿಂದ ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಗೆಲುವಿನಲ್ಲೂ ಕೊಕ್ಕೆ ಹಾಕುವ ಕೆಲಸ ಮಾಡಿದೆ ಪಾಕ್.
ಹೌದು, ಮೊಹಮ್ಮದ್ ಶಮಿ ವಿಕೆಟ್ ಪಡೆದ ನಂತರ ಮೈದಾನದಲ್ಲಿ ಮಂಡಿಯೂರಿದ ಬಗ್ಗೆ ಟೀಮ್ ಇಂಡಿಯಾವನ್ನು ಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ.
ಪಾಕಿಸ್ತಾನಿ ಪತ್ರಕರ್ತರು ಮತ್ತು ಅಭಿಮಾನಿಗಳು ಶಮಿ ಅವರ ಈ ಕ್ಲಿಪ್ ಅನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶಮಿ ಸಜ್ದಾ ಮಾಡಲು ಬಯಸಿದ್ದರು. ಆದರೆ ಅವರು ಭಾರತದಲ್ಲಿ ಇದ್ದಿದ್ದರಿಂದ ಹಾಗೆ ಮಾಡಲು ಸಾಧ್ಯವಾಗಲ್ಲಿಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ.
ಟ್ವಿಟ್ಟರ್‌ನಲ್ಲಿ ‘ಸಜ್ದಾ’ ಟ್ರೆಂಡಿಂಗ್ ಆರಂಭಿಸಿದಾಗ, ಭಾರತೀಯ ಅಭಿಮಾನಿಗಳು ತಕ್ಕ ಉತ್ತರವನ್ನು ನೀಡಿದರು.
ತಿರುಗೇಟು ನೀಡಿದ ಭಾರತೀಯರು:
ಪಾಕಿಸ್ತಾನಿ ಅಭಿಮಾನಿ ಶಹರ್ಯಾರ್ ಇಜಾಜ್ ಟ್ವೀಟ್ ಮಾಡಿ ಹೀಗೆ ಬರೆದಿದ್ದಾರೆ – ಶಮಿ ಸಜ್ದಾ(ಮಂಡಿಯೂರಿ ದೇವರಿಗೆ ನಮಿಸುವುದು) ಮಾಡಲಿದ್ದರು. ಆದರೆ ಯಾಕೆ ಅರ್ಧಕ್ಕೆ ನಿಲ್ಲಿಸಿದರು? ಜಿನ್ನಾ, ನಮಗೆ ಸ್ವಾತಂತ್ರ್ಯ ನೀಡಿದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದು ಇದೇ ರೀತಿಯ ಟ್ವೀಟ್‌ಗಳನ್ನು ಇತರ ಪಾಕಿಸ್ತಾನಿ ಅಭಿಮಾನಿಗಳು ಕೂಡ ಮಾಡಿದ್ದಾರೆ. ಇದೀಗ ಭಾರತೀಯರಿಂದ ತಕ್ಕ ತಿರುಗೇಟು ಸಹ ಪಡೆದಿದ್ದಾರೆ.
“ನಮಗೆ ಶಮಿ ಮತ್ತು ಸಿರಾಜ್ ಮತ್ತು ಬಹುಶಃ ಕೊಹ್ಲಿ, ಬುಮ್ರಾ (ಪಂಜಾಬಿ ಹಿಂದೂ) ಮತ್ತು ನಂಬರ್ 1 ತಂಡ ಮತ್ತು 5ನೇ ಅತಿದೊಡ್ಡ ಆರ್ಥಿಕತೆಯನ್ನು ನೀಡಿದ ಜಿನ್ನಾ ಅವರಿಗೆ ಧನ್ಯವಾದಗಳು..” ಎಂದು ಭಾರತೀಯರೊಬ್ಬರು ಬರೆದು ತಿರುಗೇಟು ನೀಡಿದ್ದಾರೆ. ಹೀಗೆ ಹಲವರು ತಕ್ಕ ಉತ್ತರ ನೀಡಿದ್ದು, ಮತ್ತೊಬ್ಬರು ವಿರಾಟ್ ಕೊಹ್ಲಿ ಮಂಡಿಯೂರಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ.