WORLD CUP 2023 : ಬೆಂಗಳೂರು ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡದ ಪಂದ್ಯಕ್ಕೆ ಮಳೆ ಕಾಟ ನೀಡಿದೆ.
ಪಂದ್ಯದಲ್ಲಿ ಮೊದಲು ಆಡಿದ ನ್ಯೂಜಿಲೆಂಡ್ 6 ವಿಕೆಟ್‌ಗೆ 401 ರನ್ ಗಳಿಸಿತ್ತು. ರಚಿನ್ ರವೀಂದ್ರ 108 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಇದಕ್ಕೆ ಪ್ರತಿಯಾಗಿ ಎರಡು ಬಾರಿ ಮಳೆಯಿಂದಾಗಿ ಸ್ಥಗಿತಗೊಂಡಿತ್ತು.
ಆಟ ನಿಲ್ಲಿಸುವ ಹೊತ್ತಿಗೆ ಪಾಕಿಸ್ತಾನ 25.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 200 ರನ್ ಗಳಿಸಿತ್ತು. ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಪಾಕಿಸ್ತಾನ ತಂಡ 21 ರನ್‌ಗಳಿಂದ ಮುಂದಿತ್ತು. ಈ ಮೂಲಕ ಪಾಕ್ ಗೆಲುವು ದಾಖಲಿಸಿದೆ.
Advertisement. Scroll to continue reading.
8-8 ಪಂದ್ಯಗಳ ನಂತರ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು 8-8 ಅಂಕಗಳನ್ನು ಹೊಂದಿವೆ. ಆದರೆ ನೆಟ್ ರನ್ ರೇಟ್ ನಿಂದಾಗಿ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದ್ದು, ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನ ತಂಡ 5ನೇ ಸ್ಥಾನದಲ್ಲಿದೆ.
In this article:bcci, cricket, Diksoochi news, ICC, newzealad vs pak, Pakistan, worldcup2023
Click to comment