Connect with us

Hi, what are you looking for?

Diksoochi News

ರಾಜ್ಯ

ಶಿವಮೊಗ್ಗ : ರೈಲ್ವೆ ನಿಲ್ದಾಣದ ಬಳಿ 2 ಅನಾಮಧೇಯ ಬಾಕ್ಸ್ ಪತ್ತೆ; ಆತಂಕ

0

ಶಿವಮೊಗ್ಗ:  ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ 2 ಅನಾಮಧೇಯ ಬಾಕ್ಸ್‌ಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿಸಿದೆ.

ರೈಲ್ವೆ ನಿಲ್ದಾಣದಲ್ಲಿ ಅನಾಮಧೇಯ ಬಾಕ್ಸ್ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್ ಗ್ರೈನ್ಸ್ ಆ್ಯಂಡ ಶುಗರ್ಸ್ ಎಂದು ಬರೆಯಲಾಗಿದೆ. ನಿನ್ನೆಯಿಂದಲೂ ಪಾರ್ಕಿಂಗ್ ಲಾಟ್ನಲ್ಲೇ ಬಾಕ್ಸ್‌ಗಳಿವೆ ಎನ್ನಲಾಗಿದೆ.

Advertisement. Scroll to continue reading.

ಅನಾಮಧೇಯ ಬಾಕ್ಸ್ ಪತ್ತೆಯಾಗಿರುವ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ಸಾರ್ವಜನಿಕರು ಹತ್ತಿರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

ಸದ್ಯ ಬಾಕ್ಸ್ ಸುತ್ತ ಮರಳಿನ ಚೀಲ ಜೋಡಿಸಲಾಗಿದೆ. ಬಾಕ್ಸ್ ಪರಿಶೀಲನೆ ನಡೆಸಲು ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡ ಹೊರಟ್ಟಿದ್ದು, ಸಂಜೆ ವೇಳೆಗೆ ಶಿವಮೊಗ್ಗ ತಲುಪುವ ಸಾಧ್ಯತೆ ಇದೆ. ಬಾಂಬ್ ನಿಷ್ಕ್ರಿಯ ತಂಡ ಆಗಮಿಸಿದ ನಂತರ ಬಾಕ್ಸ್ ತೆರೆಯಲಿದ್ದಾರೆ

ಈ ಅನಾಮಧೇಯ ಬಾಕ್ಸ್‌ಗಳನ್ನು ಕಾರೊಂದರಲ್ಲಿ ತಂದು ಇಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯವನ್ನು ಪರಿಶೀಲನೆ ನಡೆಸುತ್ತಿದ್ದಾರೆ. 

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!