Connect with us

Hi, what are you looking for?

Diksoochi News

ಕ್ರೀಡೆ

WORLDCUP 2023 : ಬರ್ತ್‌ಡೇ ಬಾಯ್ ಕೊಹ್ಲಿ ಸೆಂಚುರಿ ಸಂಭ್ರಮ: ಸಚಿನ್ ದಾಖಲೆ ಸರಿಸಮ

1

WORLDCUP 2023 : ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ತಮ್ಮ ಹುಟ್ಟುಹಬ್ಬದಂದೇ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ 49ನೇ ಏಕದಿನ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ದಶಕಗಳ ಕಾಲ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅತಿಹೆಚ್ಚು ಏಕದಿನ ಶತಕ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

2023ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 103 ರನ್‌ಗಳ ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ.

Advertisement. Scroll to continue reading.

ಏಕದಿನ ಕ್ರಿಕೆಟ್‌ನಲ್ಲಿ ಹುಟ್ಟುಹಬ್ಬದಂದು 50+ ರನ್ ಬಾರಿಸಿದ ಭಾರತ ಬ್ಯಾಟರ್‌ಗಳಿವರು:

ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಹುಟ್ಟುಹಬ್ಬದಂದೇ 50+ ರನ್ ಬಾರಿಸಿದ ಭಾರತದ ಆರನೇ ಬ್ಯಾಟರ್ ಎನಿಸಿಕೊಂಡರು.

ಸಚಿನ್ ತೆಂಡುಲ್ಕರ್(25ನೇ ಹುಟ್ಟುಹಬ್ಬ)
ವಿನೋದ್ ಕಾಂಬ್ಳಿ(21ನೇ ಹುಟ್ಟುಹಬ್ಬ)
ನವಜೋತ್ ಸಿಂಗ್ ಸಿಧು(31ನೇ ಹುಟ್ಟುಹಬ್ಬ)
ಇಶಾನ್ ಕಿಶನ್(23ನೇ ಹುಟ್ಟುಹಬ್ಬ)
ಯೂಸುಫ್ ಪಠಾಣ್(26ನೇ ಹುಟ್ಟುಹಬ್ಬ)
ವಿರಾಟ್ ಕೊಹ್ಲಿ(35ನೇ ಹುಟ್ಟುಹಬ್ಬ)

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!