ಮುಂಬೈ: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರೊಂದಿಗೆ ನಾನು ಡೇಟಿಂಗ್ ನಡೆಸುತ್ತಿಲ್ಲ ಎಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹೇಳಿದ್ದಾರೆ.
‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಈ ಬಗ್ಗೆ ಅವರು ಸ್ಪಷ್ಟಪಡಿಸಿದ್ದಾರೆ. 8ನೇ ಆವೃತ್ತಿಯ ಈ ಕಾರ್ಯಕ್ರಮಕ್ಕೆ ಅವರು ನಟಿ ಅನನ್ಯಾ ಪಾಂಡೆ ಜೊತೆ ಭಾಗವಹಿಸಿದ್ದರು.
ಸದ್ಯ ಬಿಡುಗಡೆಯಾಗಿರುವ ಕಾರ್ಯಕ್ರಮದ ಪ್ರೊಮೊದಲ್ಲಿ ಗಿಲ್ ಕುರಿತು ಸಾರಾ ಹೇಳಿಕೆ ನೀಡಿದ್ದಾರೆ. ನಿರೂಪಕ ಕರಣ್ ಜೋಹರ್ ಅವರು ಗಿಲ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಪ್ರಶ್ನಿಸಿದ್ದಕ್ಕೆ, ‘ನೀವು ಬೇರೊಬ್ಬ ಸಾರಾಳನ್ನು ನೋಡುತ್ತಿದ್ದೀರಿ ಗೆಳೆಯರೇ. ಸಾರಾಳ ಪೂರ್ಣ ಜಗತ್ತು ತಪ್ಪು ತಿಳಿಯಲಾದ ಸಾರಾ ಹಿಂದೆ ಬಿದ್ದಿದೆ’ ಎಂದಿದ್ದಾರೆ.
ಮತ್ತೊಬ್ಬ ‘ಸಾರಾ’ :
ಡೆಂಗ್ಯೂ ಜ್ವರದಿಂದಿಂದಾಗಿ ಭಾರತ ತಂಡದ ಪರ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಗಿಲ್, ಇದೀಗ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಅವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.
ವಿಶ್ವಕಪ್ ಪಂದ್ಯವೊಂದರ ವೇಳೆ ಕ್ರಿಡಾಂಗಣದಲ್ಲಿ ಪ್ರೇಕ್ಷಕರು ‘ಸಾರಾ.. ಸಾರಾ’ ಎನ್ನುತ್ತಾ, ಗಿಲ್ ಅವರನ್ನು ಕಿಚಾಯಿಸಿರುವುದು ಕಂಡುಬಂದಿತ್ತು. ಆ ಸಂದರ್ಭ ವಿರಾಟ್ ಕೊಹ್ಲಿ, ಪ್ರೇಕ್ಷಕರತ್ತ ಕೈ ಬೀಸಿ, ಸಹ ಆಟಗಾರನ ಜೆರ್ಸಿ ಮೇಲಿನ ಹೆಸರು (ಗಿಲ್) ತೋರುತ್ತಾ.. ಗಿಲ್ ಎಂದು ಕರೆಯುವಂತೆ ಸನ್ನೆ ಮಾಡಿದ್ದಾರೆ.
ಗಿಲ್ ಸದ್ಯ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿರುವ 6 ಪಂದ್ಯಗಳ 6 ಇನಿಂಗ್ಸ್‌ಗಳಿಂದ 2 ಅರ್ಧಶತಕ ಸಹಿತ 219 ರನ್ ಗಳಿಸಿದ್ದಾರೆ.