ಏಕದಿನ ವಿಶ್ವಕಪ್ 2023ರಲ್ಲಿ ಭಾರತ ವಿಜಯಯಾತ್ರೆಯಲ್ಲಿದೆ. ಸತತ 7 ಪಂದ್ಯ ಗೆದ್ದು ಸೆಮೀಸ್‌ಗೆ ಎಂಟ್ರಿ ಕೊಟ್ಟಿದೆ. ಇದರ ನಡುವೆ ಇಂದು ಐಸಿಸಿ ಏಕದಿನ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಇದರಲ್ಲಿಯೂ ಭಾರತೀಯರೇ ಮೇಲುಗೈ ಸಾಧಿಸಿದ್ದಾರೆ.
ಐಸಿಸಿ ಏಕದಿನ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಭಾರತದ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.
ಶುಭ್ ಮನ್ ಅವರು ಒಟ್ಟು 830 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಬಾಬರ್‌ರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಪಾಕ್ ನಾಯಕ 824 ರೇಟಿಂಗ್‌ಗಳೊಂದಿಗೆ ನಂ. 2 ಸ್ಥಾನಕ್ಕೆ ಕುಸಿದಿದ್ದಾರೆ.
ಶುಭ್‌ಮನ್ ಗಿಲ್ ನಂಬರ್ 1 ಪಟ್ಟಕ್ಕೇರಿದರೆ, ಕೊಹ್ಲಿ ಮತ್ತು ರೋಹಿತ್ ಸಹ ಟಾಪ್ 10 ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಈ ಮೂಲಕ ಏಕದಿನ ಶ್ರೇಯಾಂಕದಲ್ಲಿ ಭಾರತೀಯರ ಆರ್ಭಟ ಆರಂಭವಾಗಿದೆ.
ICC ODI ಶ್ರೇಯಾಂಕ: 1) ಶುಭ್‌ಮನ್ ಗಿಲ್ (830), 2) ಬಾಬರ್ ಆಜಮ್ (824, 3) ಕ್ವಿಂಟನ್ ಡಿ ಕಾಕ್ (771), 4) ವಿರಾಟ್ ಕೊಹ್ಲಿ (770), 5) ಡೇವಿಡ್ ವಾರ್ನರ್ (743), 6) ರೋಹಿತ್ ಶರ್ಮಾ (739), 7) ವ್ಯಾನ್ ಡೆರ್ ಡಸ್ಸೆನ್ (730), 8) ಹ್ಯಾರಿ ಟೆಕ್ಟರ್ (729), 9) ಹೆನ್ರಿಕ್ ಕ್ಲಾಸೆನ್ (725), 10) ಡೇವಿಡ್ ಮಲಾನ್ (704).
ಭಾರತದ ಪರ ಕಡಿಮೆ ಇನ್ನಿಂಗ್ಸ್ ಆಡಿ ನಂಬರ್ 1 ಸ್ಥಾನಕ್ಕೇರಿದ ಪಟ್ಟಿಯಲ್ಲಿ ಧೋನಿ ಬಳಿಕ ಗಿಲ್ 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಧೋನಿ 38 ಇನ್ನಿಂಗ್ಸ್ ಬಳಿಕ ನಂಬರ್ 1 ಆದರೆ ಶುಭ್‌ಮನ್ ಗಿಲ್ 41 ಇನ್ನಿಂಗ್ಸ್ ಬಳಿಕ ನಂ.1 ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.