ಕ್ರಿಕೆಟ್‌ನಲ್ಲಿ ಬ್ಯಾಟಿಂಗ್, ಬೌಲಿಂನಗ್‌ನಷ್ಟೇ ಫೀಲ್ಡಿಂಗ್ ಕೂಡ ಮುಖ್ಯ. ಕ್ಯಾಚ್ ವಿನ್ ದ ಮ್ಯಾಚ್ ಎಂಬ ವಾಕ್ಯ ಕ್ರಿಕೆಟ್‌ನಲ್ಲಿ ಅದೆಷ್ಟೋ ಸಲ ಸಾಬೀತಾಗಿದೆ. ಅದಕ್ಕೆ ಉತ್ತಮ ಉದಾಹರಣೆ ವಿಶ್ವಕಪ್‌ನ ಮೊನ್ನೆಯ ಆಫ್ಘನ್- ಆಸ್ಟ್ರೇಲಿಯಾ ಪಂದ್ಯ. ಆ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ನೀಡಿದ ಮೂರು ಸುಲಭ ಕ್ಯಾಚ್ ಕೈಚೆಲ್ಲಿದ ಆಫ್ಘನರು ಪಂದ್ಯ ಸೋತಿದಲ್ಲದೆ, ಸೆಮಿಫೈನಲ್ ರೇಸ್‌ನಿಂದಲೇ ಹೊರ ಬಿದ್ದರು.
ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಎಂಥೆಂಥ ಅದ್ಭುತ ಫೀಲ್ಡರ್‌ಗಳನ್ನು ನಾವು ನೋಡಿದ್ದೇವೆ. ಜಾಂಟಿ ರೋಡ್ಸ್, ರಿಕಿ ಪಾಂಟಿಂಗ್, ಯುವರಾಜ್, ಕೈಫ್, ರೈನಾ, ಜಡೇಜಾರಂಥಹ ಫೀಲ್ಡರ್‌ಗಳು ಜಿಂಕೆಯಂತೆ ಜಿಗಿಯುತ್ತಾ ಬಾಲ್ ಹಿಡಿಯೋದು, ಕ್ಯಾಚ್ ಪಡೆಯೋದು ಕಂಡಿದ್ದೇವೆ.
ಈಗ ಲೋಕಲ್ ಪಂದ್ಯವೊಂದರಲ್ಲಿ ಕೀಪರ್ ಓರ್ವ ಬೆನ್ನಿನಲ್ಲಿ ಕ್ಯಾಚ್ ಹಿಡಿದಿರುವುದು ವೈರಲ್ ಆಗಿದೆ. ವೀಡಿಯೋವನ್ನು ನೋಡಿದಾಗ ಕೇರಳದಲ್ಲಿ ಈ ಪಂದ್ಯ ನಡೆದಿರುವಂತೆ ಕಂಡು ಬರುತ್ತದೆ.
ವೀಡಿಯೋದಲ್ಲಿ ಬೌಲರ್ ಎಸೆದ ಚೆಂಡು ಬ್ಯಾಟ್ಸ್‌ಮನ್ ಬ್ಯಾಟ್‌ಗೆ ತಗುಲಿ ಎಡ್ಜ್ ಆಗಿ ಕೀಪರ್ ಕಡೆ ಚಲಿಸುತ್ತದೆ. ಬೃಹತ್ ದೇಹದ ಕೀಪರ್ ಕ್ಯಾಚ್ ಹಿಡಿಯಲು ತನ್ನ ಬಲಬದಿಗೆ ಡೈವ್ ಹೊಡೆಯುತ್ತಾನೆ. ಆದರೆ ಚೆಂಡು ಅವನ ಗ್ಲೌವ್ಸ್ ತಾಗಿ ಮೇಲಕ್ಕೆ ನೆಗೆದು ತನ್ನ ಬೆನ್ನ ಮೇಲೆ ಬೀಳುತ್ತದೆ. ಈ ವೇಳೆ ಸಮಯ ಪ್ರಜ್ಞೆ ಮೆರೆದ ಕೀಪರ್ ಚೆಂಡು ನೆಲಕ್ಕೆ ಬೀಳದಂತೆ ತಡೆಯುತ್ತಾನೆ. ಮತ್ತೋರ್ವ ಫೀಲ್ಡರ್ ಬಂದು ಚೆಂಡನ್ನು ಎತ್ತಿ ಔಟ್ ಎಂಬಂತೆ ಸಂಭ್ರಮಿಸುತ್ತಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುವುದರ ಜತೆಗೆ ಔಟ್ ಹೌದೋ ಅಲ್ಲವೋ ಎಂದು ಚರ್ಚೆ ಕೂಡ ನಡೆಸುತ್ತಿದ್ದಾರೆ.