ಬೆಂಗಳೂರು: ಭಾರತೀಯ ಮೂಲದ ನ್ಯೂಜಿಲ್ಯಾಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಅವರು ಈ ಬಾರಿಯ ವಿಶ್ವಕಪ್ ನಲ್ಲಿ ತಮ್ಮ ಉತ್ತಮ ಆಟದ ಮೂಲಕ ಜನಮನ ಗೆದ್ದಿದ್ದಾರೆ. ಚೊಚ್ಚಲ ಕೂಟದಲ್ಲಿಯೇ ಮೂರು ಶತಕಗಳೊಂದಿಗೆ ಐನೂರಕ್ಕೂ ಹೆಚ್ಚು ರನ್ ಗಳಿಸಿ ಗಮನ ಸೆಳೆದಿದ್ದಾರೆ.
ಮೂಲತಃ ರಚಿನ್ ರವೀಂದ್ರ ಅವರ ತಂದೆ ತಾಯಿ ಬೆಂಗಳೂರಿನವರು. ಉದ್ಯೋಗ ನಿಮಿತ್ತ ಅವರು ದಶಕಗಳಿಂದ ಅವರು ನ್ಯೂಜಿಲ್ಯಾಂಡ್ ನಲ್ಲಿ ನೆಲೆಸಿದ್ದಾರೆ. ರಚಿನ್ ರವೀಂದ್ರ ಅವರು ನ್ಯೂಜಿಲ್ಯಾಂಡ್ ಪರವಾಗಿ ಆಡುತ್ತಿದ್ದು, ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಪಂದ್ಯವಾಡಿ ಗೆದ್ದಿತ್ತು. ಈ ನಡುವೆ ಬೆಂಗಳೂರಿನಲ್ಲಿರುವ ತನ್ನ ಅಜ್ಜಿ ಮನೆಗೆ ರಚಿನ್ ರವೀಂದ್ರ ಭೇಟಿ ನೀಡಿದ್ದಾರೆ.
Advertisement. Scroll to continue reading.
ರಚಿನ್ ಅವರ ಅಜ್ಜಿ ಅವರ ದೃಷ್ಟಿ ತೆಗೆಯುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ವೀಡಿಯೋ ನೋಡಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
In this article:bengaluru, Diksoochi news, new Zealand, Rachin grandmother, Rachin grandmother home, Rachin native, rachin ravindra
Click to comment