ಉಡುಪಿ : ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಶಾಂತಿಧಾಮ ಪೂರ್ವ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ ಕೋಟೇಶ್ವರ ಜಂಟಿ ಆಶ್ರಯದಲ್ಲಿ ಗಣಿತ ವಿಷಯ ಕಾರ್ಯಾಗಾರ ನಡೆಯಿತು.
ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರದ ಅಧ್ಯಕ್ಷ ಕೃಷ್ಣ ರಾಯ ಶಾನುಭಾಗ್ ಕುಂದಾಪುರ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ,
ಶಿಕ್ಷಕ ವೃತ್ತಿಯಲ್ಲಿ ತರಬೇತಿಯೂ ಅತಿ ಮುಖ್ಯವಾಗಿದೆ. ನಿರಂತರವಾಗಿ ವಿದ್ಯಾರ್ಥಿಗಳು ಬದಲಾಗುತ್ತಾರೆ. ಅದರಂತೆ ನಾವು ಬದಲಾಗಬೇಕು ಎಂದರು.
ಗಣಿತ ತರಬೇತಿದಾರರಾಗಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಸರಕಾರಿ ಪ್ರೌಢಶಾಲೆ ಕಾಳಾವರ ಗಣಿತ ಶಿಕ್ಷಕ ಗಣೇಶ ಶೆಟ್ಟಿಗಾರ್ ದೀಪ ಬೆಳಗಿಸುವುದರೊಂದಿಗೆ ತರಬೇತಿಗೆ ಚಾಲನೆ ನೀಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ಸಿದ್ದಾಪುರ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಗಣಿತ ಪ್ರಮುಖ್ ಜ್ಯೋತಿ ಉಪಸ್ಥಿತರಿದ್ದರು.
ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆ ಗಳಲ್ಲಿ ಹದಿಮೂರು ಸಂಸ್ಥೆಗಳ 25 ಗುರೂಜಿ ಮಾತಾಜಿಯವರು ತರಬೇತಿಯ ಪ್ರಯೋಜನವನ್ನು ಪಡೆದರು.
ಮಹೇಶ ಹೈಕಾಡಿ ಪ್ರಾಸ್ತಾವಿಕ ನುಡಿದರು. ನಾಗರತ್ನ ಉಡುಪ ವಂದಿಸಿದರು. ಅಮೃತಾ ನಿರೂಪಿಸಿದರು.