ಲಂಡನ್: ಮನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಲಂಡನ್ನಲ್ಲಿ ನಡೆದಿದೆ.
ಸ್ಥಳೀಯ ವರದಿಗಳ ಪ್ರಕಾರ ಕುಟುಂಬವು ಭಾರತೀಯ ಮೂಲದವರಾಗಿದ್ದು, ಭಾನುವಾರ ರಾತ್ರಿ ಬೆಂಕಿ ಸಂಭವಿಸುವ ಮೊದಲು ದೀಪಾವಳಿಯನ್ನು ಆಚರಿಸುತ್ತಿದ್ದರು ಎಂದು ಹೇಳಲಾಗಿದೆ.
ಅಗ್ನಿ ಅವಘಡದಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯ ಅಧೀಕ್ಷಕ ಸೀನ್ ವಿಲ್ಸನ್ ಹೇಳಿದ್ದಾರೆ.
ಘಟನೆಯ ಬಗ್ಗೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದಿ ತಿಳಿಸಿದ್ದಾರೆ.
ಲಂಡನ್ ಅಗ್ನಿಶಾಮಕ ದಳ ಮತ್ತು ಲಂಡನ್ ಆಂಬ್ಯುಲೆನ್ಸ್ ಸೇವೆ (LAS) ಯ ಹಲವಾರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಭಾನುವಾರ ಸ್ಥಳೀಯ ಸಮಯ ಸುಮಾರು 12.30 ಕ್ಕೆ ಹೌನ್ಸ್ಲೋದ ಚಾನೆಲ್ ಕ್ಲೋಸ್ನಲ್ಲಿರುವ ವಸತಿ ವಿಳಾಸದಲ್ಲಿ ಅಗ್ನಿ ಅವಘಡದ ಕರೆ ಸ್ವೀಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐವರ ಮೃತದೇಹಗಳು ಮನೆಯೊಳಗೆ ಪತ್ತೆಯಾಗಿದ್ದು, ಆರನೇ ವ್ಯಕ್ತಿ ಎಲ್ಲಿದ್ದಾನೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಐವರು ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ತುರ್ತು ಸೇವೆಗಳು ಬರುವ ಮೊದಲು ಒಬ್ಬ ವ್ಯಕ್ತಿ ಮನೆಯಿಂದ ಹೊರಹೋಗಿದ್ದಾನೆ. ಅವರನ್ನು LAS ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಗಾಯಗಳಿಂದ ಜೀವಕ್ಕೆ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ ಎಂದರು.