WORLDCUP 2023: ಕೊಟ್ಯಂತರ ಭಾರತಜಿಯರ ಕನಸು ನನಸು ಮಡುಲು ಭಾರತ ಕ್ರಿಕೆಟ್ ತಂಡಕ್ಕೆ ಇನ್ನು ಒಂದೇ ಮೆಟ್ಟಿಲು ಬಾಕಿ ಇದೆ. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 70 ರನ್‌ಗಳಿಂದ ಮಣಿಸಿತು. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪಂದ್ಯದ ವಿಜೇತರನ್ನು ಎದುರಿಸಲಿದೆ.
ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಬ್ಯಾಟ್ಅ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 398 ರನ್‌ಗಳ ಟಾರ್ಗೆಟ್ ನೀಡಿತ್ತು.
ಭಾರತದ ಬ್ಯಾಟ್ಸ್‌ಮನ್‌ಗಳು ಪಾರಮ್ಯ ಮೆರೆದರು. ಕೊಹ್ಲಿ ವಿಶ್ವದಾಖಲೆಯ ಶತಕ ಸಿಡಿಸಿದರೆ, ಶ್ರೇಯಸ್ ಸತತ ಶತಕ ಗಳಿಸಿದರು. ಇವರಿಗೆ ರೋಹಿತ್ (47), ಗಿಲ್ (80*), ರಾಹುಲ್ (39) ಸೂಕ್ತ ಬೆಂಬಲ ನೀಡಿದರು. ಪರಿಣಾಮ ನಿಗದಿತ 50 ಓವರ್‌ಗಳಲ್ಲಿ 397 ರನ್ ಗಳಿಸಿತು.
ಕಠಿಣ ಗುರಿ ಬೆನ್ನತ್ತಿದ ಕಿವೀಸ್ ರನ್ ವೇಗಕ್ಕೆ ಭಾರತದ ಬೌಲರ್‌ಗಳು ಬ್ರೇಕ್ ಹಾಕಿದರು. ಮೊದಲ ಪವರ್ ಪ್ಲೇನಲ್ಲೇ ಶಮಿ 2 ವಿಕೆಟ್ ಕಬಳಿಸಿದರು. ಬಳಿಕ ಕೇನ್ ವಿಲಿಯಮ್ಸನ್ (69), ಮಿಚೆಲ್ (134) ಸ್ವಲ್ಪ ಹೊತ್ತು ಪ್ರತಿರೋಧ ತೋರಿದರು. ಎರಡನೇ ಸ್ಪೆಲ್ ನಡೆಸಿದ ಶಮಿ ಸತತ ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವನ್ನು ಸುಲಭ ಗೊಳಿಸಿದರು.
ಘಾತಕ ದಾಳಿ ಸಂಘಟಿಸಿದ ಶಮಿ 57ರನ್‌ಗೆ 7 ವಿಕೆಟ್ ಕಬಳಿಸಿದರು.