ಮುಂಬೈ: ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ನಂತರ ಇದೀಗ ಬಾಲಿವುಡ್ ನ ಹಿರಿಯ ನಟಿ ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಜೋಲ್ ಅವರು ಬಟ್ಟೆ ಬದಲಾಯಿಸುವ ರೀತಿಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ಮಹಿಳೆಯೊಬ್ಬರ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಅಸಲಿ ಮಹಿಳೆಯನ್ನು ಬ್ರಿಟಿಷ್ ಸೋಶಿಯಲ್ ಮೀಡಿಯಾ ಪ್ರಭಾವಿ ರೋಸಿ ಬ್ರೀನ್ ಎಂದು ಗುರುತಿಸಲಾಗಿದೆ.
Advertisement. Scroll to continue reading.
ರೋಸಿ ಬ್ರೀನ್ ಅವರ 2023ರ ಜೂನ್ 5 ರಂದು ಗೆಟ್ ರೆಡಿ ವಿತ್ ಮಿ ಟ್ರೆಂಡ್ ನ ಭಾಗವಾಗಿ ಟಿಕ್ ಟಾಕ್ ನಲ್ಲಿ ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದರು. ಅದೇ ವಿಡಿಯೋಗೆ ಎಐ ಬಳಸಿ ರೋಸಿಯ ಮುಖಕ್ಕೆ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಲಾಗಿದೆ. ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುವಂತೆ ಬಿಂಬಿಸಲಾಗಿದೆ.
In this article:AI, deep fake, Diksoochi news, kajol, kajol devagan, Kathrina kaif, rashmika mandanna, ಕೃತಕ ಬುದ್ಧಿಮತ್ತೆ
Click to comment