Connect with us

Hi, what are you looking for?

Diksoochi News

ರಾಷ್ಟ್ರೀಯ

ಕೇರಳ ನರ್ಸ್‌ಗೆ ಮರಣದಂಡನೆ; ಮೇಲ್ಮನವಿ ವಜಾಗೊಳಿಸಿದ ಯೆಮನ್ ಕೋರ್ಟ್

1

ನವದೆಹಲಿ : ಯೆಮನ್ ಪ್ರಜೆಯನ್ನು ಕೊಂದ ಆರೋಪದಲ್ಲಿ 2017ರಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಯೆಮನ್‌ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ತಲಾಲ್ ಅಬ್ದೊ ಮಹ್ದಿಯ ಸ್ವಾಧೀನದಲ್ಲಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಸಲುವಾಗಿ ಆತನಿಗೆ ನಿದ್ರಾಜನಕ ಚುಚ್ಚುಮದ್ದು ನೀಡಿ ಸಾಯಿಸಿದ ಪ್ರಕರಣದಲ್ಲಿ ಪ್ರಿಯಾಳಿಗೆ ಶಿಕ್ಷೆ ವಿಧಿಸಲಾಗಿದೆ.

ಯೆಮನ್‌ಗೆ ಪ್ರಯಾಣಿಸಲು ಅನುಮತಿ ನೀಡಲು ಪ್ರಿಯಾಳ ತಾಯಿಯ ಕೋರಿಕೆಯಂತೆ ಒಂದು ವಾರದ ಒಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ದಿಲ್ಲಿ ಹೈಕೋರ್ಟ್ ಮನವಿ ಮಾಡಿತ್ತು. 2017ರಲ್ಲಿ ಅರಬ್ ದೇಶದಲ್ಲಿನ ನಾಗರಿಕ ಯುದ್ಧದ ಕಾರಣದಿಂದ ಭಾರತೀಯ ಪ್ರಜೆಗಳು ಯೆಮನ್‌ಗೆ ತೆರಳದಂತೆ ನಿರ್ಬಂಧ ವಿಧಿಸಲಾಗಿತ್ತು. ಈ ಪ್ರಯಾಣ ನಿರ್ಬಂಧವನ್ನು ಸಡಿಲಿಸಿ, ತಮಗೆ ಯೆಮನ್‌ಗೆ ತೆರಳಲು ಅನುಮತಿ ನೀಡುವಂತೆ ಪ್ರಿಯಾ ಅವರ ತಾಯಿ ಈ ವರ್ಷದ ಆರಂಭದಲ್ಲಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Advertisement. Scroll to continue reading.

ಯೆಮನ್ ಪ್ರಯಾಣಿಸಲು ನಿರ್ಬಂಧ :

ಪ್ರಿಯಾ ಅವರ ಬಿಡುಗಡೆಗೆ ಪ್ರತಿಯಾಗಿ ಮಹದಿಯ ಕುಟುಂಬಕ್ಕೆ ಪರಿಹಾರ ನೀಡುವ ಸಂಧಾನ ಮಾತುಕತೆಗಾಗಿ ಅವರ ತಾಯಿ ಯೆಮನ್‌ಗೆ ಪ್ರಯಾಣಿಸಲು ಬಯಸಿದ್ದಾರೆ.

ಅರ್ಜಿದಾರರ ಪರ ವಕಾಲತ್ತು ವಹಿಸಿರುವ ವಕೀಲ ಸುಭಾಷ್ ಚಂದರನ್ ಕೆಆರ್ ಅವರು, ಪ್ರಿಯಾಳ ತಾಯಿಗೆ ಆಕೆಯನ್ನು ಸಾವಿನಿಂದ ಕಾಪಾಡಲು ಇರುವ ಏಕೈಕ ಮಾರ್ಗವೆಂದರೆ ಮೃತನ ಕುಟುಂಬದವರ ಜತೆಗೆ ನೇರವಾಗಿ ರಾಜಿ ಸಂಧಾನ ನಡೆಸುವುದು. ಅದಕ್ಕಾಗಿ ಯೆಮನ್‌ನಲ್ಲಿ ಸಂತ್ರಸ್ತೆಯ ತಾಯಿ ಖುದ್ದು ಹಾಜರಾಗುವುದು ಅಗತ್ಯವಾಗಿದೆ. ಆದರೆ ಭಾರತೀಯ ಪ್ರಜೆಗಳು ಅಲ್ಲಿಗೆ ಪಯಣಿಸದಂತೆ ವಿಧಿಸಿರುವ ನಿಷೇಧ ತಡೆಗೋಡೆಯಾಗಿ ನಿಂತಿದೆ ಎಂದು ಹೇಳಿದ್ದರು.

ಯೆಮನ್‌ನ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಬಹುದು. ನಿರ್ದಿಷ್ಟ ಕಾರಣಗಳು ಮತ್ತು ಸೀಮಿತ ಅವಧಿಗೆ ಯೆಮನ್‌ಗೆ ಭಾರತದ ಪ್ರಜೆಗಳು ತೆರಳಬಹುದು ಎಂದು ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಕೀಲರು ಗುರುವಾರ ಹೈಕೋರ್ಟ್‌ಗೆ ತಿಳಿಸಿತ್ತು.

Advertisement. Scroll to continue reading.

ನಿಮಿಷಾ ಪ್ರಿಯಾ ಅವರನ್ನು ಕಾಪಾಡಲು ‘ಬ್ಲಡ್ ಮನಿ’ (ಕೊಲೆಯಾದವರ ಕುಟುಂಬಕ್ಕೆ ಅಪರಾಧ ಎಸಗಿದವರು ನೀಡುವ ಪರಿಹಾರದ ಹಣ) ಕುರಿತು ಯೆಮನ್ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಆದರೆ, ಯೆಮನ್‌ನಲ್ಲಿನ ಶಿಕ್ಷೆ ವಿರುದ್ಧ ಕಾನೂನು ಪರಿಹಾರ ಕಂಡುಕೊಳ್ಳಲು ಮುಂದಾಗುವಂತೆ ಸೂಚನೆ ನೀಡಿತ್ತು. ಯೆಮನ್ ಕೋರ್ಟ್ ಪ್ರಿಯಾಳ ಶಿಕ್ಷೆ ವಿರುದ್ಧದ ಮೇಲ್ಮನವಿಯನ್ನು ನ. 13ರಂದು ತಳ್ಳಿಹಾಕಿದೆ.

ಏನಿದು ಪ್ರಕರಣ?

2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೊ ಮಹ್ದಿ ಎಂಬ ವ್ಯಕ್ತಿಯನ್ನು ಹತ್ಯೆಗೈದು, ಆತನ ದೇಹವನ್ನು ಛಿದ್ರಗೊಳಿಸಿ, ಮೃತ ದೇಹದ ಅವಶೇಷಗಳನ್ನು ತನ್ನ ಯೆಮನ್ ನಲ್ಲಿನ ನಿವಾಸದ ನೀರಿನ ಕೊಳದಲ್ಲಿ ವಿಸರ್ಜಿಸಿದ ಆರೋಪದಲ್ಲಿ ನಿಮಿಷಾ ಪ್ರಿಯಾಳನ್ನು ಅಪರಾಧಿ ಎಂದು ಘೋಷಿಸಲಾಗಿತ್ತು.

2015ರಿಂದ ತಲಾಲ್ ರೊಂದಿಗೆ ಯೆಮನ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಿಮಿಷಾ, ಆತನಿಂದ ಎರಡು ವರ್ಷಗಳ ಕಾಲ ಕಿರುಕುಳಕ್ಕೆ ಒಳಗಾಗಿದ್ದೆ ಪ್ರತಿಪಾದಿಸಿದ್ದರು. ಆತ ತನ್ನ ಪಾಸ್ ಪೋರ್ಟ್ ಅನ್ನು ಕಿತ್ತುಕೊಂಡು ಮನೆಗೆ ಮರಳಲು ಸಾಧ್ಯವಾಗದಂತೆ ಮಾಡಿದ್ದ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಆಕೆ ವಾದಿಸಿದ್ದಳು. ಆತನಿಗೆ ಇಂಜೆಕ್ಷನ್ ನೀಡಿ, ಆತನನ್ನು ಪ್ರಜ್ಞಾಹೀನನ್ನಾಗಿಸಿದ ನಂತರ ಆತನಿಂದ ಪಾಸ್ ಪೋರ್ಟ್ ಅನ್ನು ವಶಪಡಿಸಿಕೊಳ್ಳುವುದು ಉದ್ದೇಶವಾಗಿತ್ತು. ಆದರೆ ಆತ ಕುಸಿದು ಬಿದ್ದು ಮೃತಪಟ್ಟ ಎಂದು ಆಕೆ ವಾದಿಸಿದ್ದಳು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!