Connect with us

Hi, what are you looking for?

Diksoochi News

ಅರೆ ಹೌದಾ!

Lucky girl: 100 ರೂ. ಗೆ ಸಿಕ್ಕಿತು 50 ಲಕ್ಷ ರೂ.ನ ಬೆಂಝ್ ಕಾರು

1

ಜೀವನದಲ್ಲಿ ತಮ್ಮ ಅದೃಷ್ಟದ ಬಾಗಿಲು ಯಾವಾಗ ತೆರೆಯುತ್ತದೆ ಎಂದು ಕಾಯುವವರು ಅನೇಕ ಮಂದಿ. ಯಾವಾಗ ತಾವಂದುಕೊಂಡಿದ್ದು ಸಿಗುವುದೋ…ಅದೃಷ್ಟ ಇದೆಯೋ ಇಲ್ಲವೊ ಎಂದು ಚಿಂತಿಸುವವರು ಅನೇಕ. ಆದ್ರೆ ಇಲ್ಲಿ ಯುವತಿಯೊಬ್ಬಳ ಅದೃಷ್ಟ ಎಂತದ್ದು ಅಂದ್ರೆ ಬರೋಬ್ಬರಿ 50 ಲಕ್ಷ ರೂ. ಕಾರು ಒಲಿದಿರೋದು.

ಹೌದು, ಅಸ್ಸಾಂನಲ್ಲಿ ವಿದ್ಯಾರ್ಥಿನಿಯೊಬ್ಬರು ಕೇವಲ 100 ರೂ.ಗೆ ಐಷಾರಾಮಿ ಮರ್ಸಿಡಿಸ್ ಕಾರನ್ನು ಖರೀದಿಸಿದ್ದಾರೆ. ಆ ಕಾರಿನ ಬೆಲೆ 50 ಲಕ್ಷ ರೂ. ಆದ್ರೆ, ಇದನ್ನು ಆಕೆ ಖರೀದಿಸಿಲ್ಲ, ಬದಲಾಗಿ ಕೂಪನ್ ಒಂದರ ಲಕ್ಕಿ ಡ್ರಾನಲ್ಲಿ ಅದೃಷ್ಟ ಒಲಿದಿದೆ. ಶ್ರೀಮಂತರು ಹೆಮ್ಮೆಪಡುವ ಮರ್ಸಿಡಿಸ್ ಕಾರನ್ನು ಕೆಳ ಮಧ್ಯಮ ವರ್ಗದ ಯುವತಿಗೆ ದಕ್ಕಿದೆ.

ಪಿಯುಸಿ ವಿದ್ಯಾರ್ಥಿನಿಗೊಲಿದ ಅದೃಷ್ಟ :

ಅಸ್ಸಾಂನ ಬಾರ್ಪೇಟ್ ನಲ್ಲಿ ವಾಸವಿರುವ 17 ವರ್ಷದ ವಿದ್ಯಾರ್ಥಿನಿ ದಿಶಾ ದಾಸ್, ಪ್ರಸ್ತುತ 12 ನೇ ತರಗತಿಯಲ್ಲಿ ಓದುತ್ತಿದ್ದು ರಾತ್ರೋರಾತ್ರಿ ದುಬಾರಿ ಕಾರಿನ ಮಾಲೀಕರಾಗಿಬಿಟ್ಟಿದ್ದಾರೆ. ಕೇವಲ 100 ರೂ. ಕೊಟ್ಟು ಖರೀದಿಸಿದ ಕೂಪನ್‌ನಿಂದ 50 ಲಕ್ಷ ಮೌಲ್ಯದ ಐಷಾರಾಮಿ ಕಾರನ್ನು ಗೆದ್ದಿದ್ದಾರೆ. ಸದ್ಯ 100 ರೂ.ಗೆ ಮರ್ಸಿಡಿಸ್ ಬೆಂಝ್ ಕಾರನ್ನು ಗೆದ್ದು ಸುದ್ದಿಯಲ್ಲಿದ್ದಾರೆ.

Advertisement. Scroll to continue reading.

ಕೈ ಹಿಡಿದ ಲಕ್ಕಿ ಡ್ರಾ :

ಬಾರ್ಪೆಟ್ ಪುಸ್ತಕ ಮತ್ತು ವಿಜ್ಞಾನ ಮೇಳವು ಫೆಬ್ರವರಿ 2024 ರಲ್ಲಿ ನಡೆಯಲಿದೆ. ಇದನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಇತ್ತೀಚೆಗೆ ಲಕ್ಕಿ ಡ್ರಾವನ್ನು ನಡೆಸಲಾಯಿತು. ಅದೇ 100 ರೂ. ಲಕ್ಕಿ ಡ್ರಾ ಕೂಪನ್ ಆಟ, ಇದರಲ್ಲಿ ದಿಶಾ ದಾಸ್ ಕೂಡ ಕೌಂಟರ್‌ನಿಂದ ಗಿಫ್ಟ್ ಕೂಪನ್ ಖರೀದಿಸಿದ್ದರು. ಮೂಲಗಳ ಪ್ರಕಾರ ದಿಶಾ ಎರಡು ಕೂಪನ್‌ಗಳನ್ನು ಖರೀದಿಸಿದ್ದರು.

ದಿಶಾರನ್ನು ಸ್ಥಳೀಯರು ಅದೃಷ್ಟದ ಹುಡುಗಿ ಎಂದು ಕರೆಯುತ್ತಿದ್ದಾರೆ. ಬಹುಮಾನವಾಗಿ ಸ್ವೀಕರಿಸಿರುವ ಮರ್ಸಿಡಿಸ್ ಯಾವ ವೇರಿಯೆಂಟ್ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಉಳಿದಂತೆ ಈ ಲಕ್ಕಿ ಡ್ರಾನಲ್ಲಿ ಯುವತಿಯು ಮರ್ಸಿಡಿಸ್ ಕಾರನ್ನು ಗೆದ್ದಿರುವ ಸುದ್ದಿಯು ದೇಶಾದ್ಯಂತ ವೈರಲ್ ಆಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

0 ಪೆರ್ಡೂರು : ಆರ್‌.ಸಿ.ಸಿ ಬೆಳ್ಳರ್ಪಾಡಿ, ರೋಟರಿ ಕ್ಲಬ್ ಮಣಿಪಾಲ ಟೌನ್, ಕರ್ನಾಟಕ ಅರಣ್ಯ ಇಲಾಖೆ ಹೆಬ್ರಿ ವಲಯ ಪೆರ್ಡೂರು ಶಾಖೆ ಇವರ ಸಹಯೋಗದಲ್ಲಿ ವನಮಹೋತ್ಸವ, ಸಸಿ ವಿತರಣೆ ಮತ್ತು ಸನ್ಮಾನ ಸಮಾರಂಭ...

error: Content is protected !!