ಬ್ರಹ್ಮಾವರ : ಬಂಟರ ಯಾನೆ ನಾಡವರ ಮಾತೃ ಸಂಘ ಇವರ ವತಿಯಿಂದ ಲಯನ್ಸ್ ಕ್ಲಬ್ ಕೆಂಜೂರು ಇವರು ಆಯೋಜಿಸಿದ ಉಚಿತ ಯೋಗ ತರಬೇತಿ ಶಿಬಿರ ಗುರುವಾರ ಬ್ರಹ್ಮಾವರ ಭಂಟರ ಭವನದಲ್ಲಿ ಜರುಗಿತು.
ಮಾತೃ ಸಂಘದ ಸದಸ್ಯ ಬ್ರಹ್ಮಾವರ ಸಂಘದ ಸಂಚಾಲಕ ಬಿ. ಭುಜಂಗ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನಿಯಮಿತ ಯೋಗ ಆರೋಗ್ಯವಾಗಿರಲು ಸಹಕಾರಿ ಎನ್ನಲು ನಾನೇ ಉದಾಹರಣೆ. ಕಳೆದ ೪೦ ವರ್ಷದಿಂದ ಯೋಗವನ್ನು ಮುಂದುವರಿಸಿಕೊಂಡು ಬಂದ ಕಾರಣ ಅನೇಕ ಮಾನಸಿಕ ಒತ್ತಡ ನಿವಾರಣೆ ಸಹನಾ ಶಕ್ತಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಕೆಂಜೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯಶ್ರೀ ವಿಜಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಜ್ಯೋತಿ ಮಾಧವ ಪ್ರಭು, ಯೋಗ ಶಿಕ್ಷಕರಾದ ಗೋಪಾಲಕೃಷ್ಣ ದೀಕ್ಷೀತ್, ಪ್ರಿಯಾಂಕ ಜಿ, ದೀಕ್ಷಿತ್ ಇನ್ನಿತರರು ಉಪಸ್ಥಿತರಿದ್ದರು.
Advertisement. Scroll to continue reading.

In this article:Brahmavara Bunts Sangha, Diksoochi news, lions club brahmavara, yoga training

Click to comment