ಮಂಡ್ಯ: ಶ್ರೀರಂಗಪಟ್ಟಣದ ಕೆಆರ್ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ನಡೆದಿದೆ
ಹರೀಶ್, ನಂಜುಂಡ ಹಾಗೂ ಜ್ಯೋತಿ ಮೃತಪಟ್ಟವರು. ಮೈಸೂರಿನ ಕಾರುಣ್ಯ ಟ್ರಸ್ಟ್ ನ 25 ಸಿಬ್ಬಂದಿ ರಜೆ ಹಿನ್ನಲೆ ಮೋಜು-ಮಸ್ತಿಗಾಗಿ ಬಂದಿದ್ದರು. ಈ ವೇಳೆ ಕೆಆರ್ಎಸ್ ಹಿನ್ನೀರಿನಲ್ಲಿ ಆಟವಾಡುವಾಗ ಮುಳುಗಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಇಬ್ಬರು ಮೃತದೇಹ ಹೊರಗೆ ತೆಗೆದಿದ್ದಾರೆ. ಮತ್ತೊಬ್ಬನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
Advertisement. Scroll to continue reading.
ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.