ಉಡುಪಿ : ಚಿರತೆಯೊಂದು ಶಿರ್ವ ಪದವು ಕಲ್ಲೋಟ್ಟುವಿನಲ್ಲಿ ದೇವಣ್ಣ ನಾಯಕ್ ಅವರ ಸಾಕು ನಾಯಿಯನ್ನು ಬಲಿ ಪಡೆದಿದೆ. ಸಾಕು ನಾಯಿಯ ಮುಕ್ಕಾಲು ಭಾಗ ತಿಂದು, ಉಳಿದ ಭಾಗ ಅಲ್ಲಿಯೇ ಬಿಟ್ಟು ಹೋಗಿದೆ.
ಈ ಘಟನೆ ಸೋಮವಾರ ಬೆಳಗ್ಗೆ ಮನೆಯವರಿಗೆ ಗೋಚರಿಸಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈ ಭಾಗದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿ ಕಂಡುಬಂದಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement. Scroll to continue reading.