ಅಹಮದಾಬಾದ್: 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ 6 ನೇ ಬಾರಿ ಗೆದ್ದು ಬೀಗಿದೆ. ಈ ನಡುವೆ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಭಾರತೀಯ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸೀಸ್ ಭಾರತ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ 6ನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಆದರೆ, ಎಕ್ಸ್ ಖಾತೆಯಲ್ಲಿ ಭಾರತ ತಂಡದ ಅಭಿಮಾನಿಗಳ ಕ್ಷಮೆ ಕೋರಿರುವ ಡೇವಿಡ್ ವಾರ್ನರ್, ಆಸ್ಟ್ರೇಲಿಯಾ 6ನೇ ಟ್ರೋಫಿ ಗೆಲ್ಲುವ ಮೂಲಕ ಕೋಟ್ಯಾನು ಕೋಟಿ ಭಾರತೀಯ ಅಭಿಮಾನಿಗಳ ಹೃದಯ ಒಡೆದಿದ್ದೇವೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಾನು ಕ್ಷಮೆಯಾಚಿಸುತ್ತೇನೆ. ನಿಜಕ್ಕೂ ಇದೊಂದು ಅತ್ಯದ್ಭುತ ಪಂದ್ಯವಾಗಿತ್ತು ಮತ್ತು ನಂಬಲಾಗದ ವಾತಾವರಣ ಸೃಷ್ಟಿಯಾಗಿತ್ತು. ಭಾರತ ನಿಜಕ್ಕೂ ಗಂಭೀರವಾದ ವಿಶ್ವಕಪ್ ಟೂರ್ನಿಯನ್ನೇ ನಡೆಸಿಕೊಟ್ಟಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.
