ಮಣಿಪಾಲ : ಸ್ಕೂಟಿ ಹಾಗೂ ಬೈಕ್ನಡುವೆ ಡಿಕ್ಕಿ ಸಂಭವಿಸಿ ಬೈಕ್ನ ಹಿಂಬದಿ ಸವಾರೆ ಮೃತಪಟ್ಟ ಘಟನೆ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದಿದೆ.
ಹಿರಿಯಡಕದ ಸುಶ್ಮಿತಾ (19) ಮೃತಪಟ್ಟವರು.
ಕಾಯಿನ್ ಸರ್ಕಲ್ನಿಂದ ಸಿಂಡಿಕೇಟ್ ಸರ್ಕಲ್ಗೆ ಬೈಕ್ ಹಾಗೂ ಸ್ಕೂಟಿ ತೆರಳುತ್ತಿತ್ತು. ಸ್ಕೂಟಿ ಸವಾರ ಸಿಗ್ನಲ್ ನೀಡದೆ ಒಮ್ಮೆಲೇ ಬಲಕ್ಕೆ ತಿರುಗಿಸಿದ ಕಾರಣ ಬೈಕ್ ಸವಾರ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಸುಶ್ಮಿತಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಪರೀಕ್ಷಿಸಿದ ವೈದ್ಯರು ಸುಶ್ಮಿತಾ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
Advertisement. Scroll to continue reading.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.