ಕೋಟ : ಸಾಮಾಜಿಕ ಜಾಲತಾಣದಲ್ಲಿ ತಂದೆ – ಮಗ ಹೆಬ್ಬಾವು ಹಿಡಿದ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿನ ಸಾಲಿಗ್ರಾಮದ ಪುಟ್ಟ ಹುಡುಗ ಧೀರಜ್ ಐತಾಳ್ ನೆಟ್ಟಿಗರಿಂದ ಶಹಬ್ಬಾಸ್‌ಗಿರಿ ಪಡೆಯುತ್ತಿದ್ದಾನೆ.
ಇತ್ತೀಚಿಗೆ ಸಾಲಿಗ್ರಾಮ ಪರಿಸರದಲ್ಲಿ ಸೆರೆಸಿಕ್ಕ ಭಾರೀ ಗಾತ್ರದ ಹೆಬ್ಬಾವು ಹಿಡಿಯುವಲ್ಲಿ ಈ ಹುಡುಗ ಖ್ಯಾತಿ ಗಳಿಸಿದ್ದಾನೆ.
12 ವರ್ಷದ ಧೀರಜ್ ಹೆಬ್ಬಾವಿಗೆ ಹೆದರದೆ ತಲೆಗೆ ಕೈಹಾಕಿ ಹಿಡಿದ ದೃಶ್ಯ ವೈರಲ್ ಆಗಿದೆ. ಚಿತ್ರಪಾಡಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾದ ಈತ, ತನ್ನ ತಂದೆ ಸುಧೀಂದ್ರ ಐತಾಳ್ ಜೊತೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಳಿ ವಾಸ್ತವ್ಯವಿದ್ದಾರೆ.
ಸುಧೀಂದ್ರ ಐತಾಳ್ ಪ್ರಾಣಿ ಪ್ರಿಯರಾಗಿದ್ದು, ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ತಮ್ಮ ಮನೆಯಲ್ಲಿ ಚಿಕಿತ್ಸೆ ನೀಡುತ್ತಾರೆ.
ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಇವರದೇ ವೀಡಿಯೋ ಹರಿದಾಡುತ್ತಿದ್ದು, ಈ ಪುಟ್ಟ ಪೋರನ ಧೈರ್ಯದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Link :
Watch this video on Facebook
https://fb.watch/ouUFXsPthi/?mibextid=ZbWKwL