ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕರಾವಳಿ ಜಿಲ್ಲೆಯ ಸಾಂಪ್ರದಾಯಕ ಕಂಬಳ, ಜೊಡುಕೆರೆ ಕ್ರೀಡಾ ಮತ್ತು ದೇವರ ಕಂಬಳದಲ್ಲಿ ದಾಖಲೆ ಬರೆದ ಬಾರಕೂರು ಶಾಂತಾರಾಮ ಶೆಟ್ಟಿಯವರ ಕಂಬಳದ ಕೋಣಗಳು ನವೆಂಬರ್ 25 ಮತ್ತು 26ರಂದು ನಡೆಯುವ ಬೆಂಗಳೂರು ಕಂಬಳಕ್ಕೆ ಶುಕ್ರವಾರ ಬೆಂಗಳೂರು ತಲುಪಿವೆ.
ಪುಟ್ಟಿ ಮತ್ತು ಮಲ್ಲಿಗೆ ಮನೆ ಹೆಸರಿನ ಕೋಣಗಳು, ಕೋಣ ಓಡಿಸುವ ಪರಿಣಿತರಾದ ಗೋಪಾಲ್ ನಾಯ್ಕ್, ಭರತ್ ನಾಯ್ಕ್ ಮತ್ತು ರಾಘು ದೇವಾಡಿಗರೊಂದಿಗೆ ತಂಡದ ಮೇನೇಜರ್ ಸೇರಿದಂತೆ 13 ಮಂದಿಯೊಂದಿಗೆ ಬೆಂಗಳೂರು ತಲುಪಿವೆ.
ಈಗಾಗಲೇ ಜೊಡುಕೆರೆ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ 150 ಪದಕ, ನೇಗಿಲು ಕಿರೀಯ ವಿಭಾಗದಲ್ಲಿ 3 ಮತ್ತು ಕೆನೆಹಲಗೆ ವಿಭಾಗದಲ್ಲಿ 95, ಸಾಂಪ್ರದಾಯಕ ಕಂಬಳದಲ್ಲಿ 450 ಪದಕ ಪಡೆದ ಹೆಗ್ಗಳಿಕೆ ಬಾರಕೂರು ಶಾಂತಾರಾಮ ಶೆಟ್ಟಿಯವರ ಕೋಣಗಳು ಪಡೆದಿವೆ.
ಕರಾವಳಿಯ ಕಂಬಳದ ಗುರಿಕಾರ ಎನ್ನುವ ಖ್ಯಾತಿ ಗಳಿಸಿರುವ ಬಾರಕೂರು ಶಾಂತಾರಾಮ ಶೆಟ್ಟಿಯವರು ಕರ್ನಾಟಕ ಸರಕಾರ ಕಂಬಳದ ಕುರಿತು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೊದಲಿಗರು. ಅವರೂ ಕೋಣಗಳ ಜೊತೆ ಬೆಂಗಳೂರಿನಲ್ಲಿದ್ದಾರೆ.
WATCH – video link : https://youtube.com/shorts/bZd7xiJn4Nc?si=rZShzWilXjqeo91y