Connect with us

Hi, what are you looking for?

Diksoochi News

ಸಿನಿಮಾ

ಬಿಗ್ ಬಾಸ್ ಸೀಸನ್ 10: ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹಾಟ್ ಬ್ಯೂಟಿ ಪವಿ ಪೊನ್ನಪ್ಪ ಯಾರು ಗೊತ್ತಾ!?

1

ಸೋಮವಾರ ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಮನೆಗೆ ಇಬ್ಬರು ಹೊಸ ವ್ಯಕ್ತಿಗಳು ಎಂಟ್ರಿ ಪಡೆದಿದ್ದಾರೆ. ಹಾಗಂತ ಇವರು ಅಲ್ಲಿಗೆ ಕೇವಲ ಗೆಸ್ಟ್ ಆಗಿ ಬಂದಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಂಟೆಸ್ಟೆಂಟ್ ಆಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.

ಒಂದು ಹುಡುಗ ಮತ್ತು ಒಂದು ಹುಡುಗಿಯನ್ನು ಇಂದು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದೆ. ಮೊದ ಮೊದಲು ಆ ಹುಡುಗಿ ಸಾನ್ಯಾ ಐಯ್ಯರ್ ಇರಬಹುದಾ ಎಂಬ ಅನುಮಾನ ವ್ಯಕ್ತವಾಗಿತ್ತು. ಆನಂತರ ಅಸಲಿ ಹುಡುಗಿಯ ಹೆಸರು ಹೊರ ಬಿದ್ದಿದೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ, ಬಿಕಿನಿ ಬಾಲೆ ಎಂದೇ ಖ್ಯಾತರಾಗಿರುವ ಪವಿ ಪೂವಪ್ಪ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಪವಿ ಪೂವಪ್ಪ ಯಾರು ಅಂತ ನೀವೇನಾದ್ರೂ ಹುಡುಕೋಕೆ ಹೊರಟ್ರೆ ಸಿಗೋದು ರಾಶಿ ರಾಶಿ ಹಾಟ್ ಫೋಟೋಗಳು. ಬಿಕಿನಿ ಶೂಟ್ ಗಳು. ಹೌದು, ಪವಿ ಪೂವಪ್ಪ ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಲವು ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ.

ಪವಿ ಪೂವಪ್ಪ ಮೂಲತಃ ಕೊಡಗಿನವರು. ಬೆಳೆದದ್ದು ಬೆಂಗಳೂರಿನಲ್ಲಿ. ಇವರ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಪವಿ ಪೂವಪ್ಪ ಆಗಿ ಬದಲಾಗಿದ್ದಾರೆ.

ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರದತ್ತ ಒಲವಿದ್ದ ಅವರು, ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಕೂಡ ಪಡೆದುಕೊಂಡಿದ್ದಾರೆ. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದು, ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಸದ್ಯ ಮಾಡೆಲಿಂಗ್ ಜಗತ್ತಿನಿಂದ ಬಿಗ್ ಬಾಸ್ ಜಗತ್ತಿಗೆ ಎಂಟ್ರಿ ಪಡೆದಿದ್ದಾರೆ. ಇಲ್ಲಿ ಎಷ್ಟು ದಿನ ಇರುತ್ತಾರೆ? ಎಂಬುದನ್ನು ಕಾದು ನೋಡಬೇಕಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಜ್ಯೋತಿಷ್ಯ

0 ದಿನಾಂಕ : ೨೨-೦೨-೨೪, ವಾರ: ಗುರುವಾರ, ನಕ್ಷತ್ರ : ಪುಷ್ಯ, ತಿಥಿ : ತ್ರಯೋದಶಿ ವಿವಾಹೇತರ ಸಂಬಂಧಗಳಿಂದ ಅಂತರ ಕಾಯ್ದುಕೊಳ್ಳಬೇಕು. ನೀವು ಸಂಬಂಧಿಕರನ್ನು ಹೆಚ್ಚು ನಂಬಬಾರದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ...

ರಾಜ್ಯ

0 ಬೆಂಗಳೂರು: ನಟ ಡಾಲಿ ಧನಂಜಯ್ ಕಾಂಗ್ರೆಸ್ ಪಕ್ಷ ಮೂಲಕ ರಾಜಕೀಯ ಪ್ರವೇಶಿಸುತ್ತಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗೆ ನಟ ಬ್ರೇಕ್ ಹಾಕಿದ್ದಾರೆ. ಈ...

ಕ್ರೀಡೆ

1 ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಲಾಗಿದೆ. ಈ ಬಗ್ಗೆ ಸ್ವತಃ...

ರಾಷ್ಟ್ರೀಯ

0 ಮುಂಬೈ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 300 ಮಂದಿಯನ್ನು ರಸ್ತೆಯಲ್ಲೇ ಸಾಲಾಗಿ ಮಲಗಿಸಿ ಡ್ರಿಪ್ಸ್‌ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಒಂದು ವಾರದಿಂದ ʼಹರಿಣಂ ಸಪ್ತಾಹʼ...

ಕ್ರೀಡೆ

0 ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯಲಿದೆ. ಎರಡೂ ತಂಡಗಳು ಈಗಾಗಲೇ ರಾಂಚಿಗೆ ಆಗಮಿಸಿದ್ದು, ಅಭ್ಯಾಸ ನಡೆಸುತ್ತಿವೆ. ಈ ಪಂದ್ಯ ಇಂಗ್ಲೆಂಡ್‌ಗೆ ಸರಣಿ ಉಳಿಸಿಕೊಳ್ಳಲು ಮಹತ್ವದ್ದಾಗಿದೆ. ಸರಣಿಯಲ್ಲಿ...

error: Content is protected !!